ನವದೆಹಲಿ: ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿಗಳಾದ ಮತ್ತು ಪ್ರದೀಪ್ ಗಾವಂಡೆ ಅವರು ಇತ್ತೀಚೆಗೆ ಎರಡನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು.
ಇದೀಗ ಟೀನಾ- ಪ್ರದೀಪ್ ದಂಪತಿ ಗೋವಾ ಪ್ರವಾಸಕ್ಕೆ ತೆರಳಿದ್ದು, ಬೀಚ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿರುವ ಟೀನಾ, 'ಅಲೆಗಳೊಂದಿಗೆ ಒಂದಾಗುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್‌ನಲ್ಲಿ ಟೀನಾ ದಾಬಿ ಅವರು ಪ್ರದೀಪ್ ಗವಾಂಡೆ ಅವರನ್ನು ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರು ಮತ್ತು ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಜೂನ್‌ನಲ್ಲಿ ಟೀನಾ ದಾಬಿ ತಮ್ಮ ಮದುವೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. 'ನಮ್ಮ ಮದುವೆಯ ಆಲ್ಬಮ್ ಇಲ್ಲಿದೆ. ಅವಿಸ್ಮರಣೀಯ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ' ಎಂದಿದ್ದರು.
ಟಿನಾ ಅವರು 2020ರ ನವೆಂಬರ್‌ನಲ್ಲಿ ಮೊದಲ ಪತಿ ಅಮೀರ್-ಉಲ್-ಶಫಿ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಟಿನಾ ಮತ್ತು ಅಮೀರ್ ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು.
ಯುಪಿಎಸ್‌ಸಿ ನಡೆಸುವ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಟಿನಾ ದಾಬಿ 2015ರ ಬ್ಯಾಚ್‌ನ ಟಾಪರ್ ಆದವರು. ಸಿವಿಲ್ ಸರ್ವೀಸಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಟಿನಾ ಅವರ ಪಾಲಿಗಿದೆ.
ಮಹಾರಾಷ್ಟ್ರದವರಾದ ಪ್ರದೀಪ್ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ದಾಬಿ, ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗವಾಂಡೆ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ನಿರ್ದೇಶಕರಾಗಿದ್ದಾರೆ.
ಅಂತರ್‌ಧರ್ಮೀಯ ಮದುವೆ, ಐಎಎಸ್ ಟಾಪರ್‌ಗಳ ಪ್ರೇಮ ಪ್ರಸಂಗ, ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳು,...ಹೀಗೆ ಹಲವು ಕಾರಣಗಳಿಂದಾಗಿ 2016ರಿಂದಲೂ ಟಿನಾ ಡಾಬಿ ಸುದ್ದಿಯಲ್ಲಿದ್ದಾರೆ.