ತಿರುವನಂತಪುರ: ವಸತಿ ಮತ್ತು ಕೃಷಿಭೂಮಿ ಹಾಗೂ ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಪರಿಸರ ಸೂಕ್ಷ್ಮ ವಲಯದ (ಇಎಸ್‌ಝೆಡ್) ವ್ಯಾಪ್ತಿಯಿಂದ ಒಂದು ಕಿಲೋಮೀಟರ್ ಹೊರಗಿಡಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ.
ಸಂಪುಟ ಸಭೆ ಬಳಿಕ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ 23 ವನ್ಯಜೀವಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಒಳಗೊಂಡ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಗೆ ವ್ಯಾಪಕ ವಿರೋಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಸತಿ ಪ್ರದೇಶ, ಕೃಷಿ ಭೂಮಿ ಮತ್ತು ಹಲವಾರು ಸಾರ್ವಜನಿಕ ಸಂಸ್ಥೆಗಳನ್ನು ಇಎಸ್‌ಝೆಡ್‌ನಿಂದ ಹೊರಗಿಡುವ ಅರಣ್ಯ ಇಲಾಖೆ ಪ್ರಸ್ತಾವವನ್ನು ಸಂಪುಟ ಅನುಮೋದಿಸಿದೆ ಎಂದು ತಿಳಿಸಿದೆ.