ಬೆಂಗಳೂರು: ಇವತ್ತಿನಿಂದ ಆಗಸ್ಟ್ 22ರವರೆಗೆ ಹಿಂದೆಂದಿಗಿಂತಲೂ ಭೀಕರ ಚಳಿ ಇರುತ್ತದೆ. ಇದನ್ನು ಅಲ್ಬೆಲಿಯನ್ ವಿದ್ಯಮಾನ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಗ್ಗೆ 5-27 ಕ್ಕೆ ಪ್ರಾರಂಭವಾಗಿ 2022ರ ಆಗಸ್ಟ್ನಲ್ಲಿ ಕೊನೆಗೊಳ್ಳುತ್ತದೆ….
ಬೆಂಗಳೂರು: ಇವತ್ತಿನಿಂದ ಆಗಸ್ಟ್ 22ರವರೆಗೆ ಹಿಂದೆಂದಿಗಿಂತಲೂ ಭೀಕರ ಚಳಿ ಇರುತ್ತದೆ. ಇದನ್ನು ಅಲ್ಬೆಲಿಯನ್ ವಿದ್ಯಮಾನ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಗ್ಗೆ 5-27 ಕ್ಕೆ ಪ್ರಾರಂಭವಾಗಿ 2022ರ ಆಗಸ್ಟ್ನಲ್ಲಿ ಕೊನೆಗೊಳ್ಳುತ್ತದೆ….
ಈ ರೀತಿಯ ಮೆಸೇಜ್ ನಿಮಗೂ ಬಂದಿರಬೇಕಲ್ಲವೆ? ವಾಟ್ಸ್ಆಯಪ್, ಫೇಸ್ಬುಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ ಈ ಮೆಸೇಜ್.
ಇವತ್ತಿನಿಂದ (ಜೂನ್ 23) ಆಗಸ್ಟ್ 22ರವರೆಗೆ… ಎಂದು ಕಳೆದ ಒಂದು ವಾರದಿಂದ ಈ ಸಂದೇಶ ಹರಿದಾಡುತ್ತಿದೆ. ದಿನಗಳೆದಂತೆ ಜೂನ್ 23 ಹೋಗಿ 'ನಾಳೆಯಿಂದ' ಎಂದು ಸಂದೇಶವನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಈ ವಾತಾವರಣದಿಂದ ಜ್ವರ, ಕೆಮ್ಮು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಉಸಿರಾಟದ ತೊಂದರೆ ಉಂಟಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು 90,000,000 ಕಿ.ಮೀ. ಆದರೆ ಈ ಅಲ್ಬೆಲಿಯನ್ ವಿದ್ಯಮಾನದ ಸಮಯದಲ್ಲಿ, ಎರಡರ ನಡುವಿನ ಅಂತರವು 152,000,000 ಕಿಮೀಗೆ ಹೆಚ್ಚಾಗುತ್ತದೆ. ಅಂದರೆ ಶೇ.66ರಷ್ಟು ಏರಿಕೆಯಾಗಿದೆ.
ದಯವಿಟ್ಟು ಇದನ್ನು ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ… ಹೀಗೆಂದು ಸಂದೇಶದಲ್ಲಿ ಹೇಳಲಾಗಿದೆ.
ಇದನ್ನು ಓದಿ ಅನೇಕ ವಯಸ್ಸಾದವರು ಹಾಗೂ ಅನಾರೋಗ್ಯಪೀಡಿತರು ಗಾಬರಿಯಾಗಿದ್ದಾರೆ. ಚಿಕ್ಕ ಮಕ್ಕಳನ್ನು ಹೊರಗೆ ಕಳುಹಿಸುವುದು ಹೇಗೆ ಎಂದು ಪಾಲಕರು ಚಿಂತೆಗೀಡಾಗಿದ್ದು, ಈ ಬಗ್ಗೆ ಜಾಲತಾಣದಲ್ಲಿ ಹಲವಾರು ಮಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಆದರೆ ಈ ಸಂದೇಶ ಸುಳ್ಳು. ಮಾಮೂಲಿಯಂತೆ ಚಳಿ, ಮಳೆ ಎಲ್ಲವೂ ಇರಲಿದೆ. ಆದರೆ ಹಿಂದಿಗಿಂತಲೂ ಭೀಕರ ಎನ್ನುವುದೆಲ್ಲಾ ಸುಳ್ಳು ಎಂದು ಫ್ಯಾಕ್ಟ್ಚೆಕ್ ಮಾಡಿದಾಗ ತಿಳಿದುಬಂದಿದೆ. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಕೆಲವೊಂದು ದಿನಗಳಲ್ಲಿ ಕಡಿಮೆಯಾಗುವುದು ಮಾಮೂಲು. ಇದು ಪ್ರಕೃತಿಯ ನಿಯಮ. ಆದರೆ ಜನರಿಗೆ ಸುಖಾಸುಮ್ಮನೆ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಈ ಸುದ್ದಿಯನ್ನು ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ.