ತಿರುವನಂತಪುರ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ. ಇದೀಗ ಡೀಸೆಲ್ ಕೊರತೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ದೂರದ ಸೇವೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಆದಾಯ ಕಡಿಮೆ ಇರುವ ಮಾರ್ಗಗಳಲ್ಲಿ ಮೊದಲು ಸೇವೆ ರದ್ದು ಮಾಡಿ ಎಂಬುದು ಕೆಎಸ್ ಆರ್ ಟಿಸಿ ಎಂಡಿ ಬಿಜು ಪ್ರಭಾಕರ್ ಸಲಹೆ ನೀಡಿದ್ದಾರೆ. ಈ ಬಗ್ಗೆ ಕ್ಲಸ್ಟರ್ ಮತ್ತು ಸಹಾಯಕ ಕ್ಲಸ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾಸರಗೋಡು ಕಾಞಂಗಾಡ್ ಡಿಪೆÇೀಗಳಲ್ಲಿ ಡೀಸೆಲ್‍ನ ತೀವ್ರ ಕೊರತೆಯಿದೆ. ಇದರಿಂದಾಗಿ ನಿನ್ನೆ ಸುಮಾರು 50 ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕಾಞಂಗಾಡು ಮಾರ್ಗದಲ್ಲಿ ಕೇವಲ ಒಂದು ಬಸ್ ಮಾತ್ರ ಕಾರ್ಯನಿರ್ವಹಿಸಿತು. ನಿನ್ನೆ ರಾತ್ರಿ ಬಂದ ನಾಲ್ಕು ಸಾವಿರ ಲೀಟರ್ ಡೀಸೆಲ್ ಬೆಳಗಿನ ವೇಳೆಗೆ ಮಾಯವಾಗಿತ್ತು. ಬಹುತೇಕ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 67 ಸೇವೆಗಳ ಪೈಕಿ 40 ಬಸ್‍ಗಳು ಮಾತ್ರ ಕಾರ್ಯನಿರ್ವಹಿಸಿದವು.
ಡೀಸೆಲ್ ಬಾಕಿಯಾಗಿ ಸುಮಾರು 40 ಲಕ್ಷ ರೂ.ಸಾಲವಿದೆ. ಡೀಸೆಲ್ ಬಿಕ್ಕಟ್ಟು ಉಲ್ಬಣಗೊಂಡಿದ್ದು, ನೌಕರರಿಗೆ ವೇತನ ನೀಡಲು ಕೂಡ ಹಣವಿಲ್ಲದೇ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಕೆಎಸ್‍ಆರ್‍ಟಿಸಿ ನೌಕರರಿಗೆ ಜುಲೈ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ.
ನಿವೃತ್ತ ನೌಕರರ ಪೆನ್ಶನ್ ಆರು ತಿಂಗಳಿಗೂ ಹೆಚ್ಚು ಕಾಲ ಬಾಕಿ ಇದೆ. ಸಾರಿಗೆ ಸಚಿವ ಆಂಟೋನಿ ರಾಜು ವೇತನ ಬಿಕ್ಕಟ್ಟು ಬಗೆಹರಿಸುವುದಾಗಿ ಭರವಸೆ ನೀಡಿದರೂ ಒಂದು ತಿಂಗಳ ಸಂಬಳವನ್ನೂ ಸರಿಯಾಗಿ ನೀಡದೆ ಪರಿಹಾರ ಕಂಡುಕೊಳ್ಳುವುದು ಏನು ಎಂಬ ಪ್ರಶ್ನೆಗಳು ನೌಕರರಲ್ಲಿ ಮೂಡಿವೆ.
ಇದೇ ವೇಳೆ ಎಐಟಿಯುಸಿ ಸದ್ಯದ ಬಿಕ್ಕಟ್ಟಿಗೆ ಸಾರಿಗೆ ಸಚಿವರೇ ಹೊಣೆ ಎಂಬ ಆರೋಪಕ್ಕೆ ಮುಂದಾಗಿದೆ. ಆರ್ಥಿಕ ಮುಗ್ಗಟ್ಟು ಮುಂದುವರಿದರೆ ಕೆಎಸ್‍ಆರ್‍ಟಿಸಿ ಯಾವುದೇ ಸೇವೆಯನ್ನು ಮುಂದುವರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಶಾಜು ಸಾಕಷ್ಟು ಡೀಸೆಲ್ ದಾಸ್ತಾನು ಇಲ್ಲದಿರುವುದು ಆಡಳಿತ ಮಂಡಳಿಯ ತಪ್ಪಾಗಿದೆ ಎಂದು ಆರೋಪಿಸಿದರು.
ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಡೀಸೆಲ್ ಕೊರತೆ; ಕೆಎಸ್‍ಆರ್‍ಟಿಸಿ ಸೇವೆ ರದ್ದು: ಕಾಸರಗೋಡು-ಕಾಞಂಗಾಡು ಸ0ಚಾರ ಅಸ್ಥಿರತೆಯಲ್ಲಿ
0
ಆಗಸ್ಟ್ 03, 2022