ಕುಂಬಳೆ: ಸುಧಾರಿತ ತಂತ್ರಜ್ಞಾನದ ನೆರವಿನಿಂದ ತಯಾರಿಸಲಾದ ಎಕ್ಸೈಡ್ ಇಂಟೆಗ್ರಾ-1000 ಇನ್ವರ್ಟರ್ ನ್ನು ಉತ್ತರ ಕೇರಳದಲ್ಲಿ ಪ್ರಥಮ ಬಾರಿಗೆ ಕುಂಬಳೆಯಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ಪ್ರಸ್ತುತ ಕಾಸರಗೋಡು ಜಿಲ್ಲೆಯ ಉತ್ಪನ್ನದ ವಿತರಕರು ಕುಂಬಳೆಯ ಬ್ಯಾಟ್ರಿಕ್ಸ್ ಸಂಸ್ಥೆಯಾಗಿದೆ. ಮೊದಲ ಮಾರಾಟವನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ವಿಕ್ರಮ್ ಪೈ ಅವರು ಸಾಮಾಜಿಕ ನೇತಾರ, ಅನಿವಾಸಿ ಉದ್ಯಮಿ ಮೊಹಮ್ಮದಾಲಿ ನಾಂಗಿ ಅವರಿಗೆ ಹಸ್ತಾಂತರಿಸಿ ನೆರವೇರಿಸಿದರು. ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಉದ್ಯಮಿ ಹಾಗೂ ಪ್ರಮುಖ ಸಾಮಾಜಿಕ-ರಾಜಕೀಯ ಹೋರಾಟಗಾರ ಅಬ್ದುಲ್ ಅಝೀಝ್ ಕೊಟ್ಟುಡಲ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡ ಕೆ.ಸಿ. ಮೋಹನನ್ ಮತ್ತಿತರು ಉಪಸ್ಥಿತರಿದ್ದರು.
ಇಂಟೆಗ್ರಾ-1000 ಇನ್ವರ್ಟರ್ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ನಿರ್ವಹಿಸಲು ಸುಲಭವಾಗಿದೆ ಮತ್ತು ಒಳಾಂಗಣದಲ್ಲಿ ಗೋಡೆಯ ಮೇಲೆ ನೇತುಹಾಕಬಹುದು ಎಂದು ಬ್ಯಾಟ್ರಿಕ್ಸ್ ವ್ಯವಸ್ಥಾಪಕ ಪಾಲುದಾರ ಮತ್ತು ಉತ್ಪನ್ನದ ವಿತರಕ ಮೊಹಮ್ಮದ್ ಅವರು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾವುದೇ ನಿರ್ವಹಣೆ ಅಗತ್ಯವಿಲ್ಲದ ಕೇವಲ ಮೂರು ಗಂಟೆಗಳಲ್ಲಿ ತನ್ನ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂಬ ವೈಶಿಷ್ಟ್ಯವನ್ನು ಹೊಂದಿದೆ. ಕಂಪನಿಯು ಐದು ವರ್ಷಗಳವರೆಗೆ ಉಚಿತ ಸೇವೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.