ಕಾಸರಗೋಡು: ಜಿಲ್ಲಾ ಟಿಟಿಐ ಕಲಾ ಉತ್ಸವದಲ್ಲಿ ಟಿಐಟಿಟಿಸಿ ನಾಯ್ಮಾರ್ ಮೂಲೆ 100 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿತು. ಎಸ್.ಎನ್.ಟಿ.ಟಿ.ಐ. ನೀಲೇಶ್ವರ 92 ಅಂಕಗಳೊಂದಿಗೆ ದ್ವಿತೀಯ ಹಾಗೂ ಡಯಟ್ ಕಾಸರಗೋಡು 88 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತು.
ಪಡನ್ನಕ್ಕಾಡ್ ನ ಶ್ರೀ ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಟೀಚರ್ ಎಜುಕೇಶನ್‍ನಲ್ಲಿ ನಡೆದ ಕಲೋತ್ಸವವನ್ನು ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಕಾಞಂಗಾಡು ನಗರಸಭಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಡಯಟ್ ಪ್ರಾಚಾರ್ಯ ಡಾ.ಕೆ.ರಘುರಾಮ ಭಟ್ ಮುಖ್ಯ ಅತಿಥಿಗಳಾಗಿ, ಸತ್ಯಭಾಮಾ ಮೆಮೋರಿಯಲ್ ಕಾಪೆರ್Çರೇಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ಸತೀಶನ್ ಭಾಗವಹಿಸಿದ್ದರು.
ಕೈಟ್ ಜಿಲ್ಲಾ ಸಂಯೋಜಕ ಎಂ.ಪಿ.ರಾಜೇಶ್, ಸರ್ಕಾರಿ ಐ.ಟಿ.ಇ ಕಣ್ಣಿವಯಲ್ ಪ್ರಾಚಾರ್ಯೆ ಎಂಎಂ ಜೆಸಿಂತಾ ಜಾನ್ ಮಾತನಾಡಿದರು.
ಕಾಸರಗೋಡು ಡಿಡಿಇ ಕೆ.ವಿ.ಪುಷ್ಪ ಸ್ವಾಗತಿಸಿ, ಸ್ವಾಗತ ಸಂಗಮ ಸಮಿತಿ ಸಂಚಾಲಕಿ ಜಿ.ಪುಷ್ಪಲತಾ ವಂದಿಸಿದರು. ಜಿಲ್ಲೆಯ ಮೂರು ಟಿಟಿಸಿ ಮತ್ತು ಡಯಟ್ ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯು ಮೂರು ಸ್ಥಳಗಳಲ್ಲಿ ನಡೆಯಿತು, ಐದು ವೇದಿಕೆಯೇತರ ಸ್ಪರ್ಧೆಗಳು, ಏಳು ವೇದಿಕೆಯ ಸ್ಪರ್ಧೆಗಳು ಮತ್ತು ಶಿಕ್ಷಕರಿಗೆ ಮೂರು ಹಂತದ ಸ್ಪರ್ಧೆಗಳು ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮುಖ್ಯ ಅತಿಥಿಯಾಗಿದ್ದರು. ಡಿ.ಡಿ.ಇ. ಕೆ.ವಿ.ಪುμÁ್ಪ, ಡಯಟ್ ಪ್ರಾಚಾರ್ಯ ಕೆ. ರಘುರಾಮ ಭಟ್, ಬಿಲ್ ಟೆಕ್ ಅಬ್ದುಲ್ಲಾ, ಕೌನ್ಸಿಲರ್ ವಿ.ವಿ. ಶೋಭಾ, ಎಸ್‍ಎಸ್‍ಕೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪಿ.ರವೀಂದ್ರನ್, ಹೊಸದುರ್ಗ ಎಇಒ ಶೆರೀಫ್ ಕುರಿಕಳ್, ಪಿಟಿಎ ಅಧ್ಯಕ್ಷ ಎಂ.ಕೆ.ರವೀಂದ್ರನ್, ಪಡನ್ನಕ್ಕಾಡ್ ಜಿಎಲ್‍ಪಿಎಸ್ ಮುಖ್ಯೋಪಾಧ್ಯಾಯಿನಿ ಕೆ.ಗೀತಾ ಮಾತನಾಡಿದರು. ಕಾರ್ಯಕ್ರಮ ಸಮಿತಿ ಸಂಚಾಲಕಿ ಪಿ.ಲತಾ ಸ್ವಾಗತಿಸಿ, ಎಸ್‍ಎನ್‍ಎಯುಪಿಎಸ್ ಮುಖ್ಯೋಪಾಧ್ಯಾಯಿನಿ ಪ್ರೀತಿ ವಂದಿಸಿದರು.