ಹೈದರಾಬಾದ್: ಹತ್ತು ಕೋಟಿ ಕೊರ್ಬೆವ್ಯಾಕ್ಸ್ ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡಲಾಗಿದೆ ಎಂದು ಬಯೊಲಾಜಿಕಲ್ ಇ ಕಂಪನಿ ಹೇಳಿದೆ.
'12ರಿಂದ 14 ವಯೋಮಾನದ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಿಕೆಯನ್ನು 2022ರ ಮಾರ್ಚ್ 16ರಿಂದ ಪ್ರಾರಂಭಿಸಲಾಗಿತ್ತು.
ಅಲ್ಲಿಂದ ಇಲ್ಲಿಯ ವರೆಗೆ ಸುಮಾರು ಏಳು ಕೋಟಿ ಲಸಿಕೆಯನ್ನು ಪೂರೈಸಲಾಗಿದೆ. 2.9 ಕೋಟಿ ಮಕ್ಕಳು ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ' ಎಂದು ಕಂಪನಿ ಪತ್ರಿಕಾ ಹೇಳಿಕೆ ನೀಡಿದೆ.
ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ, ತುರ್ತು ಸಂದರ್ಭಗಳಲ್ಲಿ ಬೂಸ್ಟರ್ ಡೋಸ್‌ಗಾಗಿ ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರ ಅನುಮತಿ ನೀಡಿದೆ.