ದೆಹಲಿ::ರಾಜಸ್ಥಾನದ ಕರೌಲಿಯಲ್ಲಿರುವ ಎಸ್‌ಬಿಐ ಶಾಖೆಯ ಭದ್ರತಾ
ಕೊಠಡಿಯಿಂದ 11 ಕೋ.ರೂ. ಮೌಲ್ಯದ ನಾಣ್ಯಗಳು ನಾಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಗುರುವಾರ 25 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ, ಜೈಪುರ, ದೌಸಾ, ಕರೌಲಿ, ಸವಾಯಿ, ಮಧೋಪುರ, ಆಲ್ವಾರ್, ಉದಯಪುರ ಹಾಗೂ ಬಿಲ್ವಾರದಾದ್ಯಂತದ ಸುಮಾರು 15 ಮಾಜಿ ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರೌಲಿ ಜಿಲ್ಲೆಯ ಮೆಹಂದಿಪುರ ಶಾಖೆಯಲ್ಲಿ 2021 ಆಗಸ್ಟ್‌ನಲ್ಲಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಎಸ್‌ಬಿಐ ಹಣ ಲೆಕ್ಕಹಾಕಲು ನಿರ್ಧರಿಸಿತು. ಅನಂತರ ನಾಣ್ಯಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಖಾತೆ ಪುಸ್ತಕಗಳ ಪ್ರಕಾರ 13 ಕೋ. ರೂ. ನಾಣ್ಯಗಳು ಇರಬೇಕಾಗಿತ್ತು. ಆದುದರಿಂದ ಬ್ಯಾಂಕ್‌ನ ಅಧಿಕಾರಿಗಳು ನಾಣ್ಯಗಳನ್ನು ಎಣಿಕೆ ಮಾಡಲು ಜೈಪುರ ಮೂಲದ ಖಾಸಗಿ ಹಣ ಲೆಕ್ಕ ಮಾಡುವರನ್ನು ಸಂಪರ್ಕಿಸಿದ್ದರು. ಅವರು ಲೆಕ್ಕ ಮಾಡಿ ಸುಮಾರು 2 ಕೋ. ರೂ. ಮೌಲ್ಯದ 3,000 ಚೀಲಗಳು ಮಾತ್ರ ಇವೆ ಎಂದು ಹೇಳಿದ್ದರು.