ಮಂಜೇಶ್ವರ: ಮೀಯಪದವಿನ ಮಾಸ್ಟರ್ಸ್ ಆಟ್ರ್ಸ್- ಸ್ಪೋಟ್ರ್ಸ್ ಕ್ಲಬ್‍ನ 11ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಸಂಭ್ರಮದಿಂದ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಗೌರವಾಧ್ಯಕ್ಷÀ ಪುಷ್ಪರಾಜ್.ಶೆಟ್ಟಿ ವಹಿಸಿದ್ದರು.ಕಾರ್ಯಕ್ರಮವನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಡಂಬಾರ್ ಇದರ ಆಡಳಿತ ಮೊಕ್ತೇಸರ ಎಸ್.ಎನ್.ಕಡಂಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಫರ್ಧೆಗಳು ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ನಡೆದವು. ಸಂಜೆ ಶ್ರೀಕೃಷ್ಣ ವೇಷ ಸ್ಪರ್ಧೆ ಜರಗಿತು. ಬಳಿಕ ಶ್ರೀಕೃಷ್ಣ ವೇಷ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನೆಯೊಂದಿಗೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಎಸ್.ವಿ.ವಿ ಎಚ್.ಎಸ್ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಧ್ಯಾಪಕರಾದ ರಾಜಾರಾಮ್.ರಾವ್, ವಿ.ಎ. ಯು.ಪಿ ಶಾಲಾ ಆಡಳಿತ ಸಲಹೆಗಾರÀ ಶ್ರೀಧರ್.ರಾವ್.ಆರ್.ಎಂ ಶುಭ ಹಾರೈಸಿದರು. ಶ್ರೀರಕ್ತೇಶ್ವರಿ ದೈವ ಕ್ಷೇತ್ರ ಹೊಸಕಟ್ಟೆಯ ಅಧ್ಯಕ್ಷ ರಂಜಿತ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದ ಪ್ರಥಮ್, ಪ್ರತೀಕ್ಷಾ.ಡಿ, ಪ್ರಿಯಾ ಹಾಗೂ ಕೇರಳ ರಾಜ್ಯದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ದಿವ್ಯಲತ.ಎನ್ ಇವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಕಲಾವಿದೆರ್ ಮಂಜೇಶ್ವರ ಇವರಿಂದ ಯಾನ್ ಉಲ್ಲೆತ್ತ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.
ಮಾಸ್ಟರ್ಸ್ ಆಟ್ರ್ಸ್- ಸ್ಪೋಟ್ರ್ಸ್ ಕ್ಲಬ್‍ನ 11ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ
0
ಆಗಸ್ಟ್ 21, 2022