ಕಾಸರಗೋಡು: ಜಿಲ್ಲೆಯಲ್ಲಿ ಅನಧಿಕೃತ ಮದ್ಯ, ಮಾದಕ ದ್ರವ್ಯ ದಾಸ್ತಾನು, ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಪ್ರತ್ಯೇಕ ಅಭಿಯಾನ ಆರಂಭಿಸಿದೆ. ಆ. 5ರಂದು ಅಭಿಯಾನ ಆರಂಭಗೊಂಡಿದ್ದು, ಸೆ. 12ರ ವರೆಗೆ ಮುಂದುವರಿಯಲಿದೆ.
ಓಣಂ ಸೇರಿದಂತೆ ವಿವಿಧ ಹಬ್ಬಗಳ ಮರೆಯಲ್ಲಿ ಅನಧಿಕೃತ ಮದ್ಯ ತಯಾರಿ, ದಾಸ್ತಾನು, ಮಾರಾಟ ಹೆಚ್ಚುವ ಸಾಧ್ಯತೆಯಿದ್ದು, ಇದನ್ನು ತಡೆಗಟ್ಟುವುದೂ ಸೇರಿದಂತೆ ಇತರ ಮಾದಕ ವಸ್ತುಗಳ ಕಳ್ಳಸಾಗಣೆ, ಸಂಗ್ರಹ ಮತ್ತು ಮಾರಾಟ ಅವ್ಯಾಹತವಾಗಿ ನಡೆಯುವ ಸಾಧ್ಯತೆ ಇರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
ಈ ಅವಧಿಯಲ್ಲಿ ಕಾಸರಗೋಡು ಮತ್ತು ಹೊಜದುರ್ಗ ಅಬಕಾರಿ ವೃತ್ತ ಕಚೇರಿಗಳು, ಗಡಿ ಪ್ರದೇಶಗಳಲ್ಲಿ ಗಸ್ತು ಘಟಕಗಳು ಮತ್ತು ಕಾಸರಗೋಡು ಅಬಕಾರಿ ವಿಭಾಗದ ಕಛೇರಿಯಲ್ಲಿರುವ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಟ್ರ್ಯಾಕಿಂಗ್ ಪಡೆಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರಿಗೆ ಮಾದಕವಸ್ತು ಮತ್ತು ಮದ್ಯಪಾನ ಅಪರಾಧಗಳ ಬಗ್ಗೆ ಮಾಹಿತಿ ಲಭಿಸಿದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ. ದೂರುಗಳಿಗೆ ಸಂಬಂಧಿಸಿ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿರಿಸಲಾಗುವುದು.
ಜಿಲ್ಲಾ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 155358, 04994 256728, ಟಾರ್ಗೆಟಿಂಗ್ ಫೆÇೀರ್ಸ್ ಕಾಸರಗೋಡು 04994 255332, ಹೊಜದುರ್ಗ 04672 204125ಅಬಕಾರಿ ಜಾರಿ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳ 04994257060
ಅಬಕಾರಿ ವೃತ್ತ ಕಛೇರಿ-ಕಾಸರಗೋಡು 04994 255332, ಹೊಸದುರ್ಗ-04672 204125, ವೆಳ್ಳರಿಕುಂಡ್-04672245100
ಅಬಕಾರಿ ರೇಂಜ್ ಕಛೇರಿ ನೀಲೇಶ್ವರ-04672283174, ಹೊಸದುರ್ಗ-04672204533, ಕಾಸರಗೋಡು-04994257541, ಕುಂಬಳೆ-04998213837, ಬಂದಡ್ಕ-04994205364, ಬದಿಯಡ್ಕ-0450983 ಎಂಬ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅನಧಿಕೃತ ಮದ್ಯ, ಮಾದಕದ್ರವ್ಯ ಸೆ.12ರವರೆಗೆ ಅಬಕಾರಿ ಇಲಾಖೆಯ 'ವಿಶೇಷ ಜಾರಿ ಅಭಿಯಾನ'
0
ಆಗಸ್ಟ್ 11, 2022
Tags