ಮಂಜೇಶ್ವರ: ಸಾಮಾಜಿಕ ಸ್ವಾಸ್ಥ್ಯ ಸೇವಾ ಸಂಕಲ್ಪದಿಂದ ಕಾರ್ಯವೆಸಗುವ ಮಂಜೇಶ್ವರದ ಶ್ರೀ ರಾಜ ಬೆಲ್ಚಪ್ಪಾಡ ಸೇವಾ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯದ
75ನೇ ವರ್ಷಚಾರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಬಾರಿಯ ಅಜಾದಿಕೀ ಅಮೃತ ಮಹೋತ್ಸವದ ಸಂಭ್ರಮಾರ್ಥ ಟ್ರಸ್ಟ್ ವತಿಯಿಂದ ಆರಿಸಿದ 75 ಬಡ ಆಶಕ್ತ ಕುಟುಂಬಗಳಿಗೆ ನಿತ್ಯೋಪಯೋಗಿಕ ಕಿಟ್ ನೀಡುವ ಮೂಲಕ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ.
ಇದರಂತೆ ಅ.14ಕ್ಕೆ ಬೆಳಿಗ್ಗೆ 10.45 ಕ್ಕೆ ಉದ್ಯಾವರ ಶ್ರೀ ಅರಸು ಮಂಜಿμÁ್ಣರ್ ಅಣ್ಣ ದೈವಗಳ ಭಂಡಾರ ಮನೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಹಿರಿಯ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ, ನಿವೃತ್ತ ಯೋಧ ಕರುಣಾಕರ ಕುಂಡುಕೊಳಕೆ ಇವರಿಂದ "ಅಜಾದಿಕೀ ಅಮೃತ ಮಹೋತ್ಸವದಂಗವಾಗಿ ಪ್ರಧಾನ ಮಂತ್ರಿ ಕರೆ ನೀಡಿದ "ಹರ್ ಘರ್ ತಿರಂಗ" ಯೋಜನೆಯಂತೆ ರಾಷ್ಟ್ರ ದ್ವಜ ಹಸ್ತಾಂತರ ಹಾಗೂ ಸೇವಾ ಯೋಜನೆಗೆ ಚಾಲನೆ ನೆರವೇರಲಿದೆ. ಈ ಸಂದರ್ಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂಥೋರೊ, ಪಂ.ಸದಸ್ಯ ಯಾದವ ಬಡಾಜೆ,ಉದ್ಯಾವರ ಶ್ರೀಅರಸು ಮಂಜಿμÁ್ಣರ್ ಕ್ಷೇತ್ರದ ಅಧ್ಯಕ್ಷ ರಘ ಶೆಟ್ಟಿ, ನ್ಯಾಯವಾದಿ ನವೀನ್ ರಾಜ್ ಹೊಸಂಗಡಿ, ಸೇವಾರತ್ನ ಭಾಸ್ಕರ್ ಯು.ಎಂ.ಉಪ್ಪಳ, ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಶ್ರೀರಾಜ ಬೆಲ್ಚಪ್ಪಾಡ, ಅಧ್ಯಕ್ಷ ವಿಜಯ ಪಂಡಿತ್ ಉಪ್ಪಳ ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು.
ಬಳಿಕ ಮದ್ಯಾಹ್ನ 12 ಗಂಟೆಗೆ ಚಿಗುರುಪಾದೆಯ ಮೊಗೇರ ಸಭಾಭವನದಲ್ಲಿ ಜರಗುವ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂ.ಎಲ್, ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೊಗೇರ ಸಮುದಾಯ ಭವನದ ಅಧ್ಯಕ್ಷ ನಾರಾಯಣ ಚಿನಾಲ, ಚಲನಚಿತ್ರ, ರಂಗನಟ ಅನಿಲ್ ರಾಜ್ ಉಪ್ಪಳ, ಶ್ರೀರಾಜ ಬೆಲ್ಚಪ್ಪಾಡ, ಅಧ್ಯಕ್ಷ ವಿಜಯ ಪಂಡಿತ್ ಉಪ್ಪಳ ಸಹಿತ ಗಣ್ಯರು ಭಾಗವಹಿಸುವರು. ಈ ಸಂದರ್ಭದಲ್ಲಿ ಆಯ್ದ 75 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಹಾಗೂ ರಾಷ್ಟ್ರ ಧ್ವಜ ಹಸ್ತಾಂತರ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಅ.14ಕ್ಕೆ ಮಂಜೇಶ್ವರದ ಶ್ರೀ ರಾಜ ಬೆಲ್ಚಪ್ಪಾಡ ಸೇವಾ ಟ್ರಸ್ಟ್ ನಿಂದ 75 ಆಸಕ್ತ ಬಡ ಕುಟುಂಬಗಳಿಗೆ ಕಿಟ್ ವಿತರಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಸಿದ್ಧತೆ
0
ಆಗಸ್ಟ್ 13, 2022