ಕಣ್ಣೂರು: ರಾಜ್ಯದಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಕಣ್ಣೂರು ಜಿಲ್ಲೆಯ ಕಣಿಚಾರ್ ಪಂಚಾಯತ್ ವ್ಯಾಪ್ತಿಯ ಕೊಲಕ್ಕಾಡ್ ಪ್ರದೇಶದ ಹಂದಿ ಫಾರಂನಲ್ಲಿ ಈ ರೋಗ ಪತ್ತೆಯಾಗಿದೆ.
ಇದುವರೆಗೆ ಜಮೀನಿನಲ್ಲಿದ್ದ 14 ಹಂದಿಗಳು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲಾಯಿತು.
ರಾಜ್ಯದಲ್ಲಿ ಮೊದಲ ಬಾರಿಗೆ ವಯನಾಡು ಜಿಲ್ಲೆಯಲ್ಲಿ ಈ ರೋಗ ಕಳೆದ ವಾರ ದೃಢಪಟ್ಟಿತ್ತು. ದಕ್ಷಿಣ ಭಾರತದಲ್ಲಿ ಆಫ್ರಿಕನ್ ಹಂದಿ ಜ್ವರದ ಮೊದಲ ಪ್ರಕರಣ ಕೇರಳದಲ್ಲಿ ದೃಢಪಟ್ಟಿದೆ.
ಮೊದಲು ಮಾನಂತವಾಡಿಯ ಜಮೀನಿನಲ್ಲಿ ಕಂಡುಬಂದಿತು. ಹಂದಿಗಳು ಹಿಂಡು ಹಿಂಡಾಗಿ ಸಾಯಲಾರಂಭಿಸಿದಾಗ, ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‍ನ ಲ್ಯಾಬ್‍ಗೆ ಕಳುಹಿಸಲಾಯಿತು. ಇದರೊಂದಿಗೆ ಕೇರಳದಲ್ಲೂ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತು.
ನಂತರ ತೋಟದ ಮಾಲೀಕರ ಒಪ್ಪಿಗೆ ಮೇರೆಗೆ ಹಂದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿತ್ತು. ಆಫ್ರಿಕನ್ ಹಂದಿ ಜ್ವರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಂದಿ ಮಾಂಸದ ಆಮದನ್ನು ನಿμÉೀಧಿಸಲಾಗಿದೆ.
ಕಣ್ಣೂರಿನಲ್ಲಿ ಆಫ್ರಿಕನ್ ಹಂದಿ ಜ್ವರ: ರೋಗದಿಂದ 14 ಹಂದಿಗಳ ಸಾವು
0
ಆಗಸ್ಟ್ 01, 2022