ನವದೆಹಲಿ: ಸಣ್ಣ ಗ್ರಾಹಕರಿಗೆ ನೀಡುವ ದರದಲ್ಲಿ ಕೆಎಸ್ ಆರ್ ಟಿಸಿ ಗೆ ಡೀಸೆಲ್ ಪೂರೈಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕ ವಲಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಹೇಳಿದೆ.
ಇದು ಸಂವಿಧಾನ ಬಾಹಿರವಾಗಿದೆ. ಮಾರುಕಟ್ಟೆ ಬೆಲೆಗೆ ಡೀಸೆಲ್ ನೀಡುವಂತೆ ಕೆ.ಎಸ್.ಆರ್.ಟಿ.ಸಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಭಾರಿ ದಂಡದೊಂದಿಗೆ ವಜಾಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪನಿ ತಿಳಿಸಿದೆ.
ಮಾರುಕಟ್ಟೆ ಬೆಲೆಗೆ ಇಂಧನ ಲಭ್ಯತೆ ಕೋರಿ ಕೆ ಎಸ್ ಆರ್ ಟಿ ಸಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಐಒಸಿ ಅಫಿಡವಿಟ್ ಸಲ್ಲಿಸಿದೆ. ಕೆ.ಎಸ್.ಆರ್.ಟಿ.ಸಿ ಬೃಹತ್ ಗ್ರಾಹಕ ಸಂಸ್ಥೆಯಾಗಿದೆ. ಅವರಿಗೆ ಸವಲತ್ತುಗಳು ಈಗಾಗಲೇ ದೊರೆತಿವೆ. ಬೆಲೆ ಏರಿಕೆಯಾದಾಗ ಸಣ್ಣ ಗ್ರಾಹಕರು ಕೊಡುವ ಬೆಲೆಗೆ ಡೀಸೆಲ್ ಪಡೆಯುವಂತೆ ಕೇಳುವುದು ಸಂವಿಧಾನ ಬಾಹಿರ.
ಡೀಸೆಲ್ ಖರೀದಿಗೆ ಕೆಎಸ್ ಆರ್ ಟಿಸಿ ಇನ್ನೂ 139.97 ಕೋಟಿ ರೂ.ಬಾಕಿ ಪಾವತಿಸಬೇಕಿದೆ. ಈ ಪೈಕಿ ಡೀಸೆಲ್ ಖರೀದಿಗೆ 123.36 ಕೋಟಿ ರೂ. ಹಾಗೂ 16.61 ಕೋಟಿ ಬಡ್ಡಿ ಪಾವತಿಸಬೇಕು ಎಂದೂ ಕಂಪನಿ ಅಫಿಡವಿಟ್‍ನಲ್ಲಿ ತಿಳಿಸಿದೆ.
ಅಫಿಡವಿಟ್ ಪ್ರಕಾರ, ಬೆಲೆ ನಿರ್ಣಯವು ನ್ಯಾಯಾಲಯದ ಪರಿಗಣನೆಯ ವಿಷಯವಲ್ಲ ಮತ್ತು ಒಪ್ಪಂದದ ಆಧಾರದ ಮೇಲೆ ಕೆಎಸ್ಆರ್ಟಿಸಿಗೆ ಡೀಸೆಲ್ ಸರಬರಾಜು ಮಾಡಲಾಗುತ್ತದೆ. ಭಾರಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಬೇಕು ಎಂದೂ ಒತ್ತಾಯಿಸಲಾಗಿದೆ.
140 ಕೋಟಿ ಮರುಪಾವತಿ ಬಾಕಿಯಿದೆ: ಮಾರುಕಟ್ಟೆ ಬೆಲೆಗೆ ಕೆ.ಎಸ್.ಆರ್.ಟಿ.ಸಿಗೆ ಡೀಸೆಲ್ ಪೂರೈಸಲು ಸಾಧ್ಯವಿಲ್ಲ; ಭಾರಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಬೇಕು: ಸುಪ್ರೀಂ ನಲ್ಲಿ ಐಓಸಿ
0
ಆಗಸ್ಟ್ 06, 2022