ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಆ. 14ರಂದು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಸಂಭ್ರಮದ ದಿವ್ಯಬಲಿಪೂಜೆ ಜರಗಲಿದೆ. ವಂದನೀಯ ಫಾ. ಪ್ರಕಾಶ್ ಲೋಬೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇಗರ್ಜಿಯ ಧರ್ಮಗುರು ವಂ. ಫಾ. ಮೆಲ್ವಿನ್ ಫೆರ್ನಾಂಡಿಸ್ ಧಾರ್ಮಿಕ ವಿಧಿವಿಧಾನಗಳಿಗೆ ನೇತೃತ್ವ ನೀಡುವರು. ವಾರ್ಷಿಕ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ನೊವೆನಾ ನಡೆಯಿತು.
14ರಂದು ವಾರ್ಷಿಕೋತ್ಸವ
0
ಆಗಸ್ಟ್ 13, 2022
Tags