ಕುಂಬಳೆ: ಮೊಗೇರ ಸರ್ವೀಸ್ ಸೊಸೈಟಿ ರಾಜ್ಯ ಸಮಿತಿ, ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಕಿದೂರು ಕುಂಟಗೇರಡ್ಕ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತೋತ್ಸವ ಹಾಗೂ ಮೊಗೇರ ಆಟಿದ ಕೂಟ 2022 ಕಾರ್ಯಕ್ರಮ ಆ. 14 ಭಾನುವಾರ ಬೆಳಗ್ಗೆ 9ರಿಂದ ಸಂಜೆ 5.30ರ ತನಕ ಕಿದೂರು ಕುಂಟಂಗೇರಡ್ಕ ರಾಜೀವ್ ಗಾಂ ಸಭಾ ಭವನದಲ್ಲಿ ನಡೆಯಲಿರುವುದು. ಪೂರ್ವಾಹ್ನ ಕುಲದೈವಗಳಿಗೆ ಕಲಶ ಪ್ರಾರ್ಥನೆ, ಪೂಜಾನೃತ್ಯ, ಸ್ವಾಗತ ನೃತ್ಯ, 10 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದೆ. ಪ್ರತಿಭಾ ಪುರಸ್ಕಾರ, ಅಭಿನಂದನೆ, 11ರಿಂದ 1ರ ತನಕ ನೃತ್ಯ ವೈವಿಧ್ಯ, ಆಟಿದ ವನಸ್ - ತೆನಸ್, ರಸಪ್ರಶ್ನೆ, ಮೊಗೇರ ಸಂಸ್ಕøತಿ ವಿಚಾರಧಾರೆ, ಜಾನಪದ ನೃತ್ಯೋತ್ಸವ ನಡೆಯಲಿದೆ.
ಆಗಸ್ಟ್ 14ರಂದು ಕಿದೂರಿನಲ್ಲಿ ಸ್ವಾತಂತ್ರ್ಯದ ಅಮೃತೋತ್ಸವ, ಮೊಗೇರ ಆಟಿದ ಕೂಟ
0
ಆಗಸ್ಟ್ 13, 2022