HEALTH TIPS

ಆರ್ಥಿಕ ಪ್ರಗತಿ ಆಶಾದಾಯಕ: ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ದರ ಶೇ.15.7ಕ್ಕೆ ವೃದ್ಧಿಸುವ ನಿರೀಕ್ಷೆ

 

               ನವದೆಹಲಿ: ಕರೊನೊತ್ತರ ದಿನಗಳಲ್ಲಿ ದೇಶದ ಆರ್ಥಿಕತೆ ಕ್ರಮೇಣ ಚೇತರಿಸಿಕೊಳ್ಳುತ್ತಿರುವುದಕ್ಕೆ ಮತ್ತೊಂದು ಸೂಚನೆಯೆಂಬಂತೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ (ಏಪ್ರಿಲ್-ಜೂನ್) ದೇಶದ ನಿವ್ವಳ ಆಂತರಿಕ ಉತ್ಪಾದನೆ ದರ (ಜಿಡಿಪಿ) ಶೇಕಡ 13- 15.7ರ ವರೆಗೆ ವೃದ್ಧಿಯಾಗುವ ಸಾಧ್ಯತೆಯಿದೆ ಎಂದು ಪ್ರಮುಖ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಿಮವಾಗಿ ಅದು ಶೇಕಡ 15.7 ದಾಟುವ ಸಂಭವವೂ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸಮೂಹದ ಪ್ರಧಾನ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ಮಂಗಳವಾರ ಹೇಳಿದ್ದಾರೆ.

               ಆದರೆ, ಜೂನ್ ತ್ರೖೆಮಾಸಿಕದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ದರ ಶೇಕಡ 13ಕ್ಕಿಂತ ಕಡಿಮೆಯಿರಲಿದೆ ಎಂದು ರೇಟಿಂಗ್ ಸಂಸ್ಥೆ ಇಕ್ರಾದ ಪ್ರಮುಖ ಅರ್ಥಶಾಸ್ತ್ರಜ್ಞೆ ಆದಿತಿ ನಾಯರ್ ಅಭಿಪ್ರಾಯ ಪಟ್ಟಿದ್ದಾರೆ. ಮಧ್ಯಮದಿಂದ ಉನ್ನತ ಆದಾಯದ ಗುಂಪಿನ ಜನರಲ್ಲಿ ಸೇವೆಗಳ ಬೇಡಿಕೆಯಲ್ಲಿ ಬದಲಾವಣೆ ಆಗಿದೆ ಎಂದು ಇಕ್ರಾ ಅಭಿಪ್ರಾಯಪಟ್ಟಿದೆ. ಪ್ರಥಮ ತ್ರೖೆಮಾಸಿಕದ ಜಿಡಿಪಿ ಮಾಹಿತಿಯನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮುಂದಿನ ವಾರ ಪ್ರಕಟಿಸಲಿದೆ.

                  ವಾಸ್ತವ ಜಿಡಿಪಿ: 2021-22ರ ದೇಶದ ವಾಸ್ತವ ಜಿಡಿಪಿ ದರ ಶೇಕಡ 8.7 ಆಗಿತ್ತು. 2020-21ರಲ್ಲಿ ಶೇಕಡ 6.6ಕ್ಕೆ ಕುಸಿದಿತ್ತು. ಕರೊನಾ ಸಾಂಕ್ರಾಮಿಕತೆಯ ಮೊದಲ ಅಲೆಯ ಹೊಡೆತದ ಕಾರಣ 2020ರ ಜೂನ್​ನಲ್ಲಿ ಜಿಡಿಪಿ ಶೇಕಡ 23.9ರಷ್ಟು ಇಳಿಕೆ ಕಂಡಿತ್ತು. 2021ರ ಜೂನ್​ನಲ್ಲಿ ಶೇಕಡ 20.21ಕ್ಕೆ ಸುಧಾರಿಸಿತ್ತು. ಎರಡನೇ ಅಲೆಯಲ್ಲಿ ದೊಡ್ಡ ಸಂಖ್ಯೆಯ ಜೀವಹಾನಿಯಾದರೂ ಆರ್ಥಿಕತೆಯಲ್ಲಿ ಚೇತರಿಕೆ ದಾಖಲಾಗಿತ್ತು.

                      ಜಾಗತಿಕ ಬಿಕ್ಕಟ್ಟುಗಳು, ರಾಜಕೀಯ ಸ್ಥಿತ್ಯಂತರಗಳು, ಹಣದುಬ್ಬರ ಹಾಗೂ ಬೇಡಿಕೆಯಲ್ಲಿ ವ್ಯತ್ಯಾಸದಿಂದಾಗಿ ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಹಲವು ಬದಲಾವಣೆಗಳಾಗಿವೆ. ಇದೆಲ್ಲದರ ಹೊರತಾಗಿಯೂ ದೇಶದ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

                  2 ವರ್ಷದಲ್ಲಿ ಹಣದುಬ್ಬರ ಶೇಕಡ 4ಕ್ಕೆ: ಮುಂದಿನ 2 ವರ್ಷಗಳಲ್ಲಿ ಹಣದುಬ್ಬರ ದರವನ್ನು ನಿಗದಿತ ಗುರಿಯಾದ ಶೇಕಡ 4ರ ಸಮೀಪ ತರಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಂಗಳವಾರ ಹೇಳಿದ್ದಾರೆ. ಬೆಳವಣಿಗೆ ದರವನ್ನು ಹೆಚ್ಚಾಗಿ ಬಿಟ್ಟುಕೊಡದೆಯೇ ಶೇಕಡ 4 ಪ್ರಮಾಣದ ಹಣದುಬ್ಬರದತ್ತ ನಾವು ಕ್ರಮೇಣವಾಗಿ ಸಾಗುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಹಣದುಬ್ಬರ ತೀರಾ ಜಾಸ್ತಿಯಾಗಿದ್ದು ದಿನ ಕಳೆದಂತೆ ಸಾಮಾನ್ಯ ಮಟ್ಟಕ್ಕೆ ಮರಳಬಹುದು. ಏನಿದ್ದರೂ ಹಣದುಬ್ಬರ ವಿಚಾರದಲ್ಲಿ ಆತ್ಮತೃಪ್ತಿಗೆ 'ಅವಕಾಶವೇ ಇಲ್ಲ' ಎಂದು ಎಚ್ಚರಿಸಿದ್ದಾರೆ.

                       ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದಲ್ಲಿ ಅಳೆಯುವ ದೇಶದ ಚಿಲ್ಲರೆ ಹಣದುಬ್ಬರ ದರ ಆಗಸ್ಟ್ 12ರಂದು ಬಿಡುಗಡೆಯಾದ ದತ್ತಾಂಶದ ಪ್ರಕಾರ ಜುಲೈನಲ್ಲಿ ಶೇಕಡ 6.71ಕ್ಕೆ ಇಳಿದಿತ್ತು. ಇದು ಕಳೆದ ಐದು ತಿಂಗಳಲ್ಲೇ ಅತಿ ಕಡಿಮೆ ದರವಾಗಿತ್ತು. ಆದರೆ, ಶೇಕಡ 4ರ ಹಣದುಬ್ಬರ ದರವನ್ನು ಆರ್​ಬಿಐ ನಿಗದಿಪಡಿಸಿ ಸತತ 34 ತಿಂಗಳು ಕಳೆದಿವೆ. ಅಲ್ಲದೆ 7 ತಿಂಗಳಿಂದ ಆರ್​ಬಿಐನ ಶೇ.2-6 ತಾಳಿಕೆ ರೇಂಜ್​ನ ಹೊರಗೆ ಈ ದರ ಇದೆ.

                 ಎಸ್​ಬಿಐ ಭವಿಷ್ಯ: ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ.15.7ಕ್ಕೆ ಬೆಳವಣಿಗೆ ಕಾಣುವ ಸಾಧ್ಯತೆ ಇದೆ ಎಂದು ಎಸ್​ಬಿಐ ಇಕೊರ್ಯಾಪ್ ವರದಿ ಅಂದಾಜಿಸಿದೆ. ಜಾಗತಿಕ ಆರ್ಥಿಕತೆ ಇನ್ನೂ ಸಂಕಷ್ಟದಲ್ಲಿದ್ದರೂ ಭಾರತದ ಆರ್ಥಿಕತೆ ಚೇತರಿಕೆಯ ಹಾದಿಗೆ ಮರಳಿದೆ. ಹಣದುಬ್ಬರ ತಗ್ಗುತ್ತಿರುವ ಕಾರಣ ಜಿಡಿಪಿ ಪ್ರಗತಿದಾಯಕವಾಗಿರಲಿದೆ ಎಂದು ವರದಿ ತಿಳಿಸಿದೆ. ಬೇಸಿಗೆಯ ಸಮಯದಲ್ಲಿ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿ ಇದ್ದಂತೆ ಕಾಣುತ್ತಿತ್ತು. ಆದರೆ ನಂತರದಲ್ಲಿ ಪೂರೈಕೆ ಜಾಲ ಪುಟಿದೆದ್ದಿದೆ. ವಿವಿಧ ವಲಯಗಳ ಪ್ರಗತಿಯ ಡೇಟಾವನ್ನು ವಿಶ್ಲೇಷಿಸಿದಾಗ ಶೇ.89ರಷ್ಟು ವೇಗ ಪಡೆದಿರುವುದು ತಿಳಿಯುತ್ತದೆ. 2021-22ರ ಕಡೆಯ ತ್ರೖೆಮಾಸಿಕದಲ್ಲಿ ಈ ಚೇತರಿಕೆಯ ಪ್ರಮಾಣ ಶೇ.75 ಇತ್ತು. ಖಾಸಗಿ ವಲಯದ ಖರ್ಚು-ವೆಚ್ಚದಲ್ಲಿ -ಠಿ;4.77 ಲಕ್ಷ ಕೋಟಿ ಇಳಿಕೆ ಆಗಿದ್ದು, ಬೇಡಿಕೆಯಲ್ಲಿ ಶೇ.54ರಷ್ಟು ಸುಧಾರಣೆ ಕಂಡಿದೆ ಎಂದು ವರದಿ ಹೇಳಿದೆ.

                 ಬ್ರಿಟನ್ ಆರ್ಥಿಕತೆ ದಾಖಲೆ ಕುಸಿತ: ಬ್ರಿಟನ್ನಿನ ಆರ್ಥಿಕತೆ ಕಳೆದ 300 ವರ್ಷಗಳಲ್ಲೇ ಅತಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2020ರಲ್ಲಿ ಅದರ ಜಿಡಿಪಿ ಶೇಕಡ 11ಕ್ಕೆ ಕುಗ್ಗಿತ್ತು. ಅದು 1709ರ ನಂತರದ ಅತಿ ಕೆಟ್ಟ ಸನ್ನಿವೇಶವಾಗಿತ್ತು ಎಂದು ಸೋಮವಾರ ಪ್ರಕಟವಾದ ಅಂಕಿ-ಸಂಖ್ಯೆ ತಿಳಿಸಿವೆ.

                2 ವರ್ಷದಲ್ಲಿ ಹಣದುಬ್ಬರ ಶೇಕಡ 4ಕ್ಕೆ: ಮುಂದಿನ 2 ವರ್ಷಗಳಲ್ಲಿ ಹಣದುಬ್ಬರ ದರವನ್ನು ನಿಗದಿತ ಗುರಿಯಾದ ಶೇಕಡ 4ರ ಸಮೀಪ ತರಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮಂಗಳವಾರ ಹೇಳಿದ್ದಾರೆ. ಬೆಳವಣಿಗೆ ದರವನ್ನು ಹೆಚ್ಚಾಗಿ ಬಿಟ್ಟುಕೊಡದೆಯೇ ಶೇಕಡ 4 ಪ್ರಮಾಣದ ಹಣದುಬ್ಬರದತ್ತ ನಾವು ಕ್ರಮೇಣವಾಗಿ ಸಾಗುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಹಣದುಬ್ಬರ ತೀರಾ ಜಾಸ್ತಿಯಾಗಿದ್ದು ದಿನ ಕಳೆದಂತೆ ಸಾಮಾನ್ಯ ಮಟ್ಟಕ್ಕೆ ಮರಳಬಹುದು. ಏನಿದ್ದರೂ ಹಣದುಬ್ಬರ ವಿಚಾರದಲ್ಲಿ ಆತ್ಮತೃಪ್ತಿಗೆ 'ಅವಕಾಶವೇ ಇಲ್ಲ' ಎಂದು ಎಚ್ಚರಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries