ಪೆರ್ಲ:ಪಡ್ರೆ ಗ್ರಾಮದ ಸ್ವರ್ಗ ಮಲೆತಡ್ಕ ಶ್ರೀ ಜಟಾಧಾರೀ ಮೂಲಸ್ಥಾನದಲ್ಲಿ ಆ.15ರಿಂದ ತಂತ್ರಿವರ್ಯ ಕೊರೆಕ್ಕಾನ ನಾರಾಯಣ ಭಟ್ ನೇತೃತ್ವದಲ್ಲಿ ವಿಶೇಷ ದೈವಿಕ ಕಾರ್ಯಕ್ರಮಗಳು ನಡೆಯಲಿವೆ. ಆ.15ರಂದು ರಾತ್ರಿ ವಾಸ್ತುಬಲಿ, 16ರಂದು ಬೆಳಗ್ಗೆ 12 ಕಾಯಿ ಗಣಪತಿ ಹವನ, ಮಧ್ಯಾಹ್ನ ಮೃತ್ಯುಂಜಯ ಹೋಮ, ರಾತ್ರಿ ಆಶ್ಲೇಷ ಬಲಿ, 17ರಂದು ಮಧ್ಯಾಹ್ನ ದುರ್ಗಾಹವನ, ಸುವಾಸಿನಿ ಪೂಜೆ, ಸಂಜೆ ನಾಗತಂಬಿಲ, ರಾತ್ರಿ ದುರ್ಗಾಪೂಜೆ, ಶ್ರೀದೈವಕ್ಕೆ ತಂಬಿಲ, ಮುಷ್ಟಿ ಕಾಣಿಕೆ ಸಮರ್ಪಣೆ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನಡೆಯಲಿದೆ.
ಆ.15ರಿಂದ ಪಡ್ರೆ ಶೀ ಜಟಾಧಾರಿ ಮೂಲಸ್ಥಾನದಲ್ಲಿ ವಾಸ್ತುಬಲಿ, ಆಶ್ಲೇಷಬಲಿ, ನಾಗತಂಬಿಲ, ದುರ್ಗಾಪೂಜೆ
0
ಆಗಸ್ಟ್ 13, 2022