ಕೊಚ್ಚಿ: ಕಾಲೇಜು ಕ್ಯಾಂಟೀನ್‍ನಿಂದ ಆಹಾರ ಸೇವಿಸಿದ ವಿದ್ಯಾರ್ಥಿನಿಯರಿಗೆ ಫುಡ್ ಪಾಯ್ಸನ್ ಆಗಿದೆ. ಪಿರವಂ ಪಲಚುವಾಡ್ ಬಿಪಿಸಿ ಕಾಲೇಜಿನ ಕ್ಯಾಂಟೀನ್‍ನಿಂದ ಆಹಾರ ಸೇವಿಸಿದ 15 ವಿದ್ಯಾರ್ಥಿನಿಯರಿಗೆ ಆಹಾರ ವಿಷವಾಗಿದೆ.
ಲೇಡಿಸ್ ಹಾಸ್ಟೆಲ್ ನಲ್ಲಿ ವಾಸವಿದ್ದ ವಿದ್ಯಾರ್ಥಿನಿಯರಿಗೆ ಪುಡ್ ಪಾಯ್ಸನ್ ತಗುಲಿದೆ.ಹಾಸ್ಟೆಲ್ ನಿಂದ ಉಪಹಾರ ಸೇವಿಸಿದ ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉಪ್ಪಿಟ್ಟು ಹಾಗೂ ಕಡಲೆ ಪದಾರ್ಥ ಸೇವಿಸಿದ್ದರು ಎನ್ನಲಾಗಿದೆ.
ಸುಮಾರು ಎಂಟು ವಿದ್ಯಾರ್ಥಿನಿಯರನ್ನು ಪಿರವಂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾದವರನ್ನು ಕೊಳಂಚೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕಾಲೇಜಿನ ಕ್ಯಾಂಟೀನ್‍ನಿಂದ ಆಹಾರ ಸೇವಿಸಿದ 15 ವಿದ್ಯಾರ್ಥಿನಿಯರಿಗೆ ವಿಷಬಾಧೆ
0
ಆಗಸ್ಟ್ 21, 2022