ಮಂಜೇಶ್ವರ: ಹರ್ ಘರ್ ತಿರಂಗ ಕಾರ್ಯಕ್ರಮಕ್ಕಾಗಿ ಮಂಜೇಶ್ವರ ಒಂದರಲ್ಲೇ 17500 ರಾಷ್ಟ್ರಧ್ವಜಗಳನ್ನು ತಯಾರಿಸಲಾಗುತ್ತಿದೆ. ಆಗಸ್ಟ್ 13 ರೊಳಗೆ ಅಗತ್ಯವಿರುವವರಿಗೆ ತಲುಪಿಸಲು ಮನೆಗಳು ಮತ್ತು ಅಂಗಡಿಗಳಲ್ಲಿ ಧ್ವಜ ತಯಾರಿಕೆಯು ವೇಗವಾಗಿ ಪ್ರಗತಿಯಲ್ಲಿದೆ. 45 ಕುಟುಂಬಶ್ರೀ ಘಟಕಗಳು ಧ್ವಜ ತಯಾರಿಯಲ್ಲಿ ತಡಗಿಸಿಕೊಂಡಿದೆ. ಘಟಕಗಳಿಗೆ ವಾರದ ಹಿಂದೆಯೇ ಧ್ವಜ ತಯಾರಿಕೆಗೆ ಸಾಮಗ್ರಿಗಳು ಒದಗಿಸಲಾಗಿತ್ತು. ಬಳಿಕ ಸದಸ್ಯರು ಮನೆ, ಅಂಗಡಿಗಳಿಗೆ ತಂದು ಧ್ವಜ ತಯಾರಿಕೆ ಕಾರ್ಯದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದಾರೆ.
ಮಂಗಳೂರು ಮತ್ತು ತಿರುಪುರದಿಂದ ಬಟ್ಟೆ ತರಲಾಗಿತ್ತು. ಮಂಜೇಶ್ವರ, ಕಡಂಬಾರ್, ಕಣ್ವತೀರ್ಥ, ಅರಿಮಲ, ಕುಂಜತ್ತೂರು ಮುಂತಾದೆಡೆ ಮನೆಗಳಲ್ಲಿ ಧ್ವಜಗಳನ್ನು ತಯಾರಿಸಲಾಗುತ್ತದೆ. ಆಗಸ್ಟ್ 8 ಮತ್ತು 9 ರಂದು ಧ್ವಜಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅಶೋಕ ಚಕ್ರದ ಮುದ್ರೆ ಮೂಡಿಸಲಾಗುತ್ತದೆ. ಬಳಿಕ 10, 11 ಮತ್ತು 12ರಂದು ತಲುಪಿಸಲಾಗುವುದು. ಆಗಸ್ಟ್ 10 ರಂದು ಮಂಜೇಶ್ವರದ ಶಾಲೆಗಳಿಗೆ ವಿತರಿಸಲಾಗುವುದು. 11 ಮತ್ತು 12 ರಂದು ಮಂಜೇಶ್ವರ ಪಂಚಾಯತಿ ಕಚೇರಿ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಧ್ವಜಗಳನ್ನು ತಲುಪಿಸಲಾಗುವುದು. ಗ್ರಾಮಸಭೆಗಳಲ್ಲೂ ಸಾರ್ವಜನಿಕರು ಧ್ವಜಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮನೆಗಳಲ್ಲದೆ, ಸಹನಾ, ಡಿಲಕ್ಸ್, ದಿಶಾ ಮತ್ತು ಹೊಲಿಗೆ ಅಂಗಡಿಗಳಲ್ಲಿ ಸಹ ಧ್ವಜಗಳನ್ನು ತಯಾರಿಸಲಾಗುತ್ತದೆ.
ಧ್ವಜಗಳನ್ನು 20 ಸೆಂ.ಮೀ ಅಗಲ ಮತ್ತು 30 ಮೀಟರ್ ಉದ್ದದಲ್ಲಿ ರಚಿಸಲಾಗುತ್ತಿದೆ. ಒಂದು ಧ್ವಜದ ಬೆಲೆ 30 ರೂ. 30ರಷ್ಟು ಲಾಭವನ್ನು ಕುಟುಂಬಶ್ರೀ ಘಟಕಗಳು ಪಡೆಯಲಿವೆ.
ಹರ್ ಘರ್ ತಿರಂಗ; ಮಂಜೇಶ್ವರದಲ್ಲಿ 17500 ಧ್ವಜಗಳ ನಿರ್ಮಾಣ
0
ಆಗಸ್ಟ್ 08, 2022