ತಿರುವನಂತಪುರ: ಮಾಜಿ ಡಿಜಿಪಿ ಲೋಕನಾಥ್ ಬೆಹ್ರಾ ಅವರು ಸೇವೆಯಲ್ಲಿದ್ದಾಗ ಅಕ್ರಮಗಳನ್ನು ತೋರಿಸಿ ಸರ್ಕಾರಿ ವೆಚ್ಚ ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅನುಮತಿಯಿಲ್ಲದೆ ಪತ್ನಿ ಕೆಲಸ ಮಾಡುವ ಸ್ಥಳದಲ್ಲಿ ಭದ್ರತೆಗೆ ಪೆÇಲೀಸ್ ಅಧಿಕಾರಿಗಳನ್ನು ನೇಮಿಸಿ ಅದರ ಮೂಲಕ ಮೂರು ಕೋಟಿ ರೂ. ವ್ಯಯಿಸಿರುವುದು ಬಹಿರಂಗಗೊಂಡಿದೆ. ಬೆಹ್ರಾ ಅವರ ಪತ್ನಿ ಟೆಕ್ನೋ ಪಾರ್ಕ್‍ನಲ್ಲಿ ಕೆಲಸ ಮಾಡುತ್ತಿದ್ದರು.
ಟೆಕ್ನೋಪಾರ್ಕ್ ಭದ್ರತೆಗೆ ಹೆಚ್ಚುವರಿಯಾಗಿ 18 ಮಹಿಳಾ ಪೋಲೀಸರನ್ನು ನಿಯೋಜಿಸಲಾಗಿದೆ. ಇದಕ್ಕಾಗಿ ಸರ್ಕಾರದ ಖಜಾನೆಯಿಂದ ಸುಮಾರು ಮೂರು ಕೋಟಿ ರೂ.ವ್ಯಯವಾಗಿದೆ. ಟೆಕ್ನೋ ಪಾರ್ಕ್‍ನಲ್ಲಿ ಭದ್ರತೆಗಾಗಿ 22 ಪೋಲೀಸರನ್ನು ಕೇಳಲಾಗಿತ್ತು. ಇದಲ್ಲದೇ ಇನ್ನೂ 18 ಮಹಿಳಾ ಪೋಲೀಸರನ್ನು ಬೆಹ್ರಾ ಬಲವಂತವಾಗಿ ಭದ್ರತೆಗೆ ನಿಯೋಜನೆ ಮಾಡಿದ್ದಾರೆ ಎಂಬ ಆರೋಪಗಳಿವೆ. ಈ ಉಚಿತ ಸೇವೆಯನ್ನು 2017 ರಲ್ಲಿ ಪ್ರಾರಂಭಿಸಲಾಯಿತು. 2020ರಲ್ಲಿ ಬೆಹ್ರಾ ನಿವೃತ್ತಿಯಾಗುವವರೆಗೂ ಇದು ಮುಂದುವರೆಯಿತು. ಈ ಹಣವನ್ನು ಬೆಹ್ರಾ ಅವರಿಂದ ವಶಪಡಿಸಿಕೊಳ್ಳುವಂತೆ ಕೈಗಾರಿಕಾ ಭದ್ರತಾ ಪಡೆಗಳ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿಲ್ಲ.
ಟೆಕ್ನೋಪಾರ್ಕ್ ಅಧಿಕಾರಿಗಳು ಹೇಳದೆ ಕೇಳದೆ ನೀಡಿದ ಭದ್ರತೆಯನ್ನು ಪಾವತಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಬೆಹ್ರಾ ಅವರಿಂದ ಹಣ ವಸೂಲಿ ಮಾಡಲು ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಪೋಲೀಸ್ ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಾಣಕ್ಕೆ ಮಂಜೂರಾಗಿದ್ದ 4.33 ಕೋಟಿ ರೂ.ವನ್ನು ದಿಕ್ಕು ತಪ್ಪಿಸಿ ಪೋಲೀಸ್ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ವಿಲ್ಲಾಗಳನ್ನು ನಿರ್ಮಿಸಿದ ಮಾಜಿ ಡಿಜಿಪಿ ಲೋಕನಾಥ್ ಬೆಹ್ರಾ ಅವರಿಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಹಣಕಾಸು ಇಲಾಖೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಈ ಆಕ್ಷೇಪವನ್ನು ನಿವಾರಿಸಿ ಬೆಹ್ರಾ ಅವರ ಕ್ರಮವನ್ನು ಸಂಪುಟ ಮಾನ್ಯ ಮಾಡಿದೆ. ಇದರ ವಿರುದ್ಧವೂ ಟೀಕೆ ಬಲವಾಗಿದೆ.
ಪತ್ನಿಯ ಸುರಕ್ಷತೆಗೆ 18 ಮಹಿಳಾ ಪೋಲೀಸರ ನೇಮಕಗೊಳಿಸಿದ್ದ ಬೆಹ್ರಾ!: 3 ಕೋಟಿ ಖರ್ಚು; ಲೋಕನಾಥ್ ಬೆಹ್ರಾ ವಿರುದ್ಧ ಆರೋಪ
0
ಆಗಸ್ಟ್ 08, 2022
Tags