ನವದೆಹಲಿ: ಮನೆ ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ. 18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ.
ಬಾಡಿಗೆದಾರರು ಈಗ ಮನೆ ಬಾಡಿಗೆಯ ಮೇಲೆ ಶೇಕಡಾ 18 ರಷ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸಬೇಕಾಗುತ್ತದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕ್ಕರ್, ಇದು ದಾರಿತಪ್ಪಿಸುವಂತಹ ವರದಿ ಎಂದು ಹೇಳಿದೆ.
ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಅದಕ್ಕೆ ಯಾವುದೇ ಜಿಎಸ್ ಟಿ ಅನ್ವಯಿಸೋದಿಲ್ಲ. ಹಾಗೆಯೇ ಮಾಲೀಕ ಅಥವಾ ಆ ಸಂಸ್ಥೆಯ ಪಾಲುದಾರ ಮನೆಯನ್ನು ವೈಯಕ್ತಿಕ ಬಳಕೆಗೆ ನೀಡಿದ್ರೆ ಆಗ ಕೂಡ ಯಾವುದೇ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ.
ಮನೆ ಬಾಡಿಗೆ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ. 18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ.