HEALTH TIPS

ಅಟಲ್​ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ: ಅ.1ರಿಂದ ಯಾರಿಗಿಲ್ಲ ಅವಕಾಶ.

 

            ನವದೆಹಲಿ: ಕಡಿಮೆ ಆದಾಯ ಹೊಂದಿರುವವರಿಗೆ 60 ವರ್ಷದ ನಂತರ ಪಿಂಚಣಿ ನೀಡುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ ಅಟಲ್ ಪಿಂಚಣಿ ಯೋಜನೆ (APY).

                  ಕೇಂದ್ರ ಸರ್ಕಾರವು 2015-16ನೇ ಸಾಲಿನಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.

                    ಯಾವುದೇ ರೀತಿಯ ಸರ್ಕಾರಿ ಪಿಂಚಣಿ ಪಡೆಯಲು ಸಾಧ್ಯವಾಗದ ಜನರಿಗಾಗಿ ಅದರಲ್ಲಿಯೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈವರೆಗೆ 4 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರಿದ್ದಾರೆ. ಅವರಲ್ಲಿ 99 ಲಕ್ಷ ಜನರು 2022 ರ ಆರ್ಥಿಕ ವರ್ಷದಲ್ಲಿಯೇ ಸೇರಿರುವುದು ವಿಶೇಷ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಇದನ್ನು ಪಡೆಯಬಹುದು ಮತ್ತು 60 ವರ್ಷಗಳ ನಂತರ ಪಿಂಚಣಿ ಪ್ರಾರಂಭವಾಗುತ್ತದೆ.

                       ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಪ್ರಕಾರ, 2022 ರ ಆರ್ಥಿಕ ವರ್ಷದ ಕೊನೆಯಲ್ಲಿ ಪಿಂಚಣಿ ಯೋಜನೆಯು 4.01 ಕೋಟಿ ಚಂದಾದಾರರನ್ನು ಹೊಂದಿದೆ. ಅವರಲ್ಲಿ 44 ಪ್ರತಿಶತ ಮಹಿಳೆಯರು. ಅಂಕಿಅಂಶಗಳ ಪ್ರಕಾರ, ಸುಮಾರು 45 ಪ್ರತಿಶತದಷ್ಟು ಅಟಲ್ ಪಿಂಚಣಿ ಯೋಜನೆ ಚಂದಾದಾರರು 18-25 ವಯಸ್ಸಿನವರಾಗಿದ್ದಾರೆ.

                    ಆದರೆ ಈ ಯೋಜನೆಯ ಉದ್ದೇಶವೇ ಬುಡಮೇಲಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಅಕ್ಟೋಬರ್​ 1ರಿಂದ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಅದೇನೆಂದರೆ, ತೆರಿಗೆ ಪಾವತಿದಾರರು ಅಂದರೆ ಈಗಾಗಲೇ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಿರುವವರು ಇನ್ನುಮೂದೆ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ.

                    ಈ ಕುರಿತು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ. ಅಕ್ಟೋಬರ್ 1 ರಂದು ಅಥವಾ ನಂತರ ಯೋಜನೆಗೆ ಸೇರುವ ತೆರಿಗೆದಾರರ ಖಾತೆಗಳನ್ನು ಮುಚ್ಚಲಾಗುತ್ತದೆ. ಆ ಸಮಯದವರೆಗೆ ಜಮಾ ಮಾಡಲಾದ ಪಿಂಚಣಿ ಮೊತ್ತವನ್ನು ಮರುಪಾವತಿಸಲಾಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ.

                  ಈ ಯೋಜನೆಯಲ್ಲಿ ಕನಿಷ್ಠ ಮಾಸಿಕ 1000 ಮತ್ತು ಗರಿಷ್ಠ 5000 ಪಿಂಚಣಿ ನೀಡಬಹುದು. ಒಂದು ವೇಳೆ 60 ವಯಸ್ಸಿನ ನಂತರ ತಿಂಗಳಿಗೆ ಒಂದು ಸಾವಿರ ರೂಪಾಯಿ ಬೇಕೆಂದರೆ ಮಾಸಿಕ 116 ರೂ. 2ಸಾವಿರ ರೂ.ಗೆ 231, ಮೂರು ಸಾವಿರಕ್ಕೆ 347, ನಾಲ್ಕು ಸಾವಿರಕ್ಕೆ 462, ಐದು ಸಾವಿರಕ್ಕೆ 577 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಚಂದಾದಾರರ ಮರಣದ ನಂತರ ಪಿಂಚಣಿ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು.

              ಚಂದಾದಾರರು ಮೃತಪಟ್ಟರೆ ಅವರ ಪತಿ/ ಪತ್ನಿಗೆ ಪಿಂಚಣಿ ನೀಡಲಾಗುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ ಪಿಂಚಣಿಯನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries