HEALTH TIPS

2018-20 ಅವಧಿಯಲ್ಲಿ ಯುಎಪಿಎ ಅನ್ವಯ ಬಂಧಿತರಾದವರಲ್ಲಿ ಶೇ. 53ರಷ್ಟು ಮಂದಿ 18-30 ವಯೋವರ್ಗದವರು

                ನವದೆಹಲಿ :ದೇಶದಲ್ಲಿ 2018 ಹಾಗೂ 2020ರ ನಡುವೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅನ್ವಯ ಬಂಧಿತರಾಧ 4,690 ಮಂದಿಯಲ್ಲಿ ಶೇ 53ರಷ್ಟು (2,488) ಜನರು 18 ರಿಂದ 30 ವರ್ಷ ವಯೋವರ್ಗವರಾಗಿದ್ದರು. ಇವರಲ್ಲಿ 13 ಮಂದಿ 18 ವರ್ಷಕ್ಕಿಂತ ಕಿರಿಯರಾಗಿದ್ದರೆ, 10 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದರು ಎಂದು ಕೇಂದ್ರ ಗೃಹ ಸಚಿವಾಲಯ ಇಂದು ರಾಜ್ಯಸಭೆಗೆ ಮಾಹಿತಿ ನೀಡಿದೆ.

                ಕೇರಳದ ಸಿಪಿಐ ಸಂಸದ ಸಂದೋಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಮೇಲಿನ ಮಾಹಿತಿ ನೀಡಿದ್ದಾರೆ.

                   ಮೇಲಿನ ಅವಧಿಯಲ್ಲಿ ಬಂಧಿಸಲ್ಪಟ್ಟ ಶೇ. 39 ರಷ್ಟು (1850) ಮಂದಿ 30-45 ವಯೋವರ್ಗದವರಾಗಿದ್ದರೆ 329 ಮಂದಿ 45-60 ವಯೋಮಿತಿಯವರಾಗಿದ್ದರು ಎಂದು ಸಚಿವರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಕೇವಲ 149 ಮಂದಿ ದೋಷಿಗಳೆಂದು ಘೋಷಿತರಾಗಿದ್ದಾರೆಂದು ಸದನದಲ್ಲಿ ಮಂಡಿಸಲಾಗಿರುವ ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯುರೋ ಅಂಕಿಅಂಶಗಳಿಂದ ತಿಳಿದು ಬರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

                    2020ರಲ್ಲಿ ಯುಎಪಿಎ ಅಡಿ ಬಂಧಿತರಾದವರ ಸಂಖ್ಯೆ ಶೇ 32ರಷ್ಟು ಕಡಿಮೆಯಾಗಿ 1,321ಗೆ ಇಳಿಕೆಯಾಗಿದ್ದರೆ 2019ರಲ್ಲಿ ಈ ಸಂಖ್ಯೆ 1948 ಆಗಿತ್ತು. ಆದರೆ 2019ರಲ್ಲಿ 34 ಮಂದಿ ದೋಷಿಗಳೆಂದು ಘೋಷಿತರಾಗಿದ್ದರೆ ಈ ಸಂಖ್ಯೆ 2020 ರಲ್ಲಿ 80ಕ್ಕೆ ಏರಿಕೆಯಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

                  2020 ರಲ್ಲಿ ಯುಎಪಿಎ ಅನ್ವಯ ಬಂಧಿತರಾದವರ ಪೈಕಿ ಗರಿಷ್ಠ 361 ಮಂದಿ ಉತ್ತರ ಪ್ರದೇಶದವರು, 346 ಮಂದಿ ಜಮ್ಮು ಕಾಶ್ಮೀರದವರು ಮತ್ತು 225 ಮಂದಿ ಮಣಿಪುರದವರಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries