HEALTH TIPS

'ಕಳೆದ ಬಾರಿಯಂತೆ ಈಗ ಸಂಭವಿಸದು': 2018 ರದ್ದು ಒಂದು ಪಾಠ: ಸಚಿವ ರೋಶಿ ಅಗಸ್ಟಿನ್


             ಕೊಚ್ಚಿ: ಜನರ ಆತಂಕ ನಿವಾರಿಸುವ ಭಾಗವಾಗಿ ಚೆರುತೋಣಿ ಅಣೆಕಟ್ಟಿನ ಶಟರ್ ತೆರವು ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಹೇಳಿದ್ದಾರೆ. ಮುಲ್ಲಪೆರಿಯಾರ್ ನಿಂದ ಚೆರುತೋಣಿಗೆ ಸ್ವಲ್ಪ ನೀರು ಹರಿಯುತ್ತದೆ. ಅಣೆಕಟ್ಟೆ ಸಾಮಥ್ರ್ಯವಿದ್ದರೂ ಏಕಾಏಕಿ ಹೆಚ್ಚು ನೀರು ಬಿಡುವ ಪರಿಸ್ಥಿತಿ ಎದುರಾಗುವುದನ್ನು ತಪ್ಪಿಸಲು ಇದೀಗ ಅಣೆಕಟ್ಟೆಯನ್ನು ಅಲ್ಪ ತೆರೆಯಲಾಗಿದೆ ಎಂದು ಸಚಿವರು ತಿಳಿಸಿದರು.
             ಇಡುಕ್ಕಿ ಚುರುತೋಣಿ ಅಣೆಕಟ್ಟಿನ ನೀರಿನ ಮಟ್ಟವು ನಿಯಮ ಕರ್ವ್ ಮಿತಿಯನ್ನು ದಾಟಿದ ನಂತರ ನಿನ್ನೆ ಬೆಳಿಗ್ಗೆ ತೆರೆಯಲಾಯಿತು. ಒಂದು ಶಟರ್ ಅನ್ನು ಐವತ್ತು ಸೆಂಟಿಮೀಟರ್‍ಗಳಷ್ಟು ಎತ್ತರಿಸಲಾಗಿದೆ ಮತ್ತು ಐವತ್ತು ಘನ ಮೀಟರ್‍ಗಳಷ್ಟು ನೀರನ್ನು ಹೊರಹಾಕಲಾಗುತ್ತದೆ.  ಮುಲ್ಲಪೆರಿಯಾರ್‍ನ ಶಟರ್‍ಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. 2018ರ ಅಣೆಕಟ್ಟು ನಿರ್ವಹಣೆ ದೊಡ್ಡ ಪಾಠವಾಗಿದೆ ಎಂದು ಸಚಿವರು ಹೇಳಿದರು.
           ಸೆಕೆಂಡಿಗೆ ಕೇವಲ ಐವತ್ತು ಸಾವಿರ ಲೀಟರ್ ನೀರು ಹೊರಬರುತ್ತದೆ. ಈಗ ಕಡಿಮೆ ನೀರು ಬರುತ್ತಿದೆ. ಇದರಿಂದ ಜನರ ಆತಂಕ ದೂರವಾಗಲಿದೆ. ಪ್ರಸ್ತುತ ಮುಲ್ಲಪೆರಿಯಾರ್ ನಲ್ಲಿ ನಿಯಮ ರೇಖೆಗಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಇದನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ಆದರೆ ಚಿಂತೆ ಮಾಡಲು ಏನೂ ಇಲ್ಲ ಎಂದಿರುವರು.
          2018 ರಲ್ಲಿ ಪರಿಸ್ಥಿತಿ ಭೀಕರವಾಗಿತ್ತು. ಪ್ರತಿ ಸೆಕೆಂಡಿಗೆ 20 ಲಕ್ಷ ಲೀಟರ್ ವರೆಗೆ ಬಿಡುಗಡೆಮಾಡಲಾಗಿತ್ತು.  ನೀರು ಹರಿದಾಗ ದೊಡ್ಡ ಸಮಸ್ಯೆ ಆಗಬಹುದು ಎಂದುಕೊಂಡಿದ್ದೆ ಆದರೆ ಕೆಳಭಾಗದಲ್ಲಿ ಯಾವುದೇ ತೊಂದರೆ ಆಗಲಿಲ್ಲ. ಆಗ ತೆಗೆದುಕೊಂಡ ಸುರಕ್ಷತಾ ಕ್ರಮಗಳನ್ನು ಈಗಲೂ ಅನುಸರಿಸಲಾಗುತ್ತಿದೆ ಎಂದರು.
             ಆಗ ಸಚಿವ ಮಣಿ ಕ್ರಮಗಳನ್ನು ನಿಯಂತ್ರಿಸಿದ್ದರು.  ಇಡುಕ್ಕಿ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರಿಂದ ಒಂದೇ ಒಂದು ಪ್ರಾಣಿಯೂ ಪ್ರಾಣ ಕಳೆದುಕೊಂಡಿಲ್ಲ. ಈಗ ಅಣೆಕಟ್ಟೆಯಲ್ಲಿ ಶೇ.76ರಷ್ಟು ಮಾತ್ರ ನೀರಿದೆ. ಅಣೆಕಟ್ಟಿನಲ್ಲಿ ಇನ್ನೂ ಇಪ್ಪತ್ತು ಪ್ರತಿಶತ ಹೆಚ್ಚು ನೀರನ್ನು ಹೊಂದಲು ಸ್ಥಳವಿದೆ. ಆದರೆ ಅದನ್ನು ಲೆಕ್ಕಿಸದೆ ಈಗ ಡ್ಯಾಂ ತೆರೆದಿದೆ ಎಂದು ಸಚಿವರು ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries