ಮಂಜೇಶ್ವರ : ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ವತಿಯಿಂದ ಮೀಯಪದವು ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಕರ್ಕಟಕ ಮಾಸ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಆ. 9 ಮಂಗಳವಾರದಿಂದ ಆ. 15 ಸೋಮವಾರದ ವರೆಗೆ ಪ್ರತೀದಿನ ಸಂಜೆ 5 ರಿಂದ ಯಕ್ಷಚಿಗುರು – 2022 ತಾಳಮದ್ದಳೆ ಸಪ್ತಾಹ ವಿವಿಧ ತಂಡಗಳಿಂದ ಶ್ರೀಕ್ಷೇತ್ರದಲ್ಲಿ ಯಶಸ್ವಿಯಾಗಿ ಜರಗಿ ಸಮಾಪನ ಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು, ಅಭ್ಯಾಗತರಾಗಿ ಉದ್ಯಮಿ ಪಿ ಆರ್ ಶೆಟ್ಟಿ ಪೆÇಯ್ಯೇಲು, ಧರ್ಮದರ್ಶಿಗಳು ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಶ್ರೀಧರ ರಾವ್ ಆರ್.ಎಂ., ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿμÁ್ಠನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಶೆಟ್ಟಿ ಕಟ್ನಬೆಟ್ಟು ಭಾಗವಹಿಸಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನ ಸಂಸ್ಥೆಗೆ ಯಕ್ಷಚಿಗುರು ಗೌರವಾರ್ಪಣೆ ಗಣ್ಯರ ಸಮಕ್ಷಮ ನೀಡಲಾಯಿತು. ಬಳಿಕ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಶ್ರೀರಾಮ ನಿರ್ಯಾಣ ತಾಳಮದ್ದಳೆ ಯಶಸ್ವಿಯಾಗಿ ಜರಗಿತು.