ಕಾಸರಗೋಡು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನಾ ಕಾಮಗಾರಿಯನ್ನು 2024ರ ಮೇ 15ರ ವೇಳೆಗೆ ಪೂರ್ತಿಗೊಳಿಸಲಾಗುವುದು ಎಂದು ಕೇರಳದ ಲೋಕೋಪಯೋಗಿ ಖಾತೆ ಸಚಿವ ಪಿ.ಎಂ ಮುಹಮ್ಮದ್ ರಿಯಾಸ್ ತಿಳಿಸಿದ್ದಾರೆ. ಜಿಲ್ಲೆಯ ಮಂಜೇಶ್ವರದಿಂದ ತ್ರಿಕರಿಪುರ ವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಅವಲೋಕನ, ಉದ್ಘಾಟನೆಗಾಗಿ ಜಿಲ್ಲೆಗೆ ಆಗಮಿಸಿದ್ದ ಅವರು ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಕುಂಬಳೆ ಮೇಲ್ಸೇತುವೆಯನ್ನು 2022ರ ಡಿಸೆಂಬರ್ ಹಾಗೂ ಕಾಸರಗೋಡು ಮೇಲ್ಸೇತುವೆಯನ್ನು 2023ರ ವೇಳೆಗೆ ಸಂಚಾರಕ್ಕೆ ತೆರವುಗೊಳಿಸಲಾಗುವುದು. ಷಟ್ಪಥ ಕಾಂಗಾರಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅತಿ ವೇಗದಿಂದ ಸಾಗುತ್ತಿದ್ದು, ಜಿಲ್ಲೆಯಲ್ಲಿ ಕೆಲಸ ಪೂರ್ತಿಗೊಳ್ಳುವ ಸಂದರ್ಭ ಕಾಸರಗೋಡಿನ ಮುಖಚ್ಛಾಯೆ ಬದಲಾಗಲಿದೆ. ಕೆಲವು ಪ್ರದೇಶಗಳಲ್ಲಿರುವ ಅಡೆತಡೆಗಳನ್ನು ಶೀಘ್ರ ಪರಿಸಹರಿಸಿ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲಸ ಶೀಘ್ರ ಪೂರ್ತಿಗೊಳಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ, ರಾಜಕೀಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಮುನ್ನಡೆಯುವುದಾಗಿ ತಿಳಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ ನೆಲ್ಲಿಕುನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಪ್ರಾದೇಶಿಕ ಅಧಿಕಾರಿ ಬಿ.ಎಲ್ ಮೀನಾ, ಪ್ರೋಜೆಕ್ಟ್ ಡ್ರೈರೆಕ್ಟರ್ ಪುನಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಹೆದ್ದಾರಿ ಷಟ್ಪಥ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದ್ದು, ಪ್ರಥಮ ರೀಚ್‍ನಲ್ಲಿ ತಲಪ್ಪಾಡಿಯಿಂದ ಚೆರ್ಕಳ ವರೆಗೆ ಕಾಮಗಾರಿ ಪೂರ್ತಿಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆ: ಜಿಲ್ಲೆಯಲ್ಲಿ 2024ಕ್ಕೆ ಕಾಮಗಾರಿ ಪೂರ್ತಿ: ಸಚಿವ ಮುಹಮ್ಮದ್ ರಿಯಾಸ್
0
ಆಗಸ್ಟ್ 17, 2022
Tags