ಕೋಝಿಕ್ಕೋಡ್: ಕಡಲತೀರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನಿನ್ನೆ ರಾತ್ರಿ ಅವಘಡ ಸಂಭವಿಸಿದೆ. ಕಾಲ್ತುಳಿತದಲ್ಲಿ ಬ್ಯಾರಿಕೇಡ್ ಕುಸಿದು ಸುಮಾರು 20 ಜನರು ಗಾಯಗೊಂಡಿದ್ದಾರೆ.
ಅಪಘಾತದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಚ್ಯಾರಿಟಿ ನೆರವಿನ ಹೆಸರಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತೆಂದು ಮಾಹಿತಿ ಹೊರಬೀಳುತ್ತಿದೆ. ಕಾರ್ಯಕ್ರಮದ ಮಾಹಿತಿಯನ್ನು ಸಂಘಟಕರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವರು ಸ್ಥಳಕ್ಕೆ ಆಗಮಿಸಿದ್ದರು. ನಂತರ ಉಂಟಾದ ಕಾಲ್ತುಳಿತದಲ್ಲಿ ಈ ಅವಘಡ ಸಂಭವಿಸಿದೆ.
ಅವಘಡದ ಬಳಿಕ ಪೋಲೀಸರು ಯಾರನ್ನೂ ಸ್ಥಳಕ್ಕೆ ಪ್ರವೇಶಿಸಲು ನಿರ್ಬಂಧಿಸಿದರು. ಈ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚುವಂತೆಯೂ ಸೂಚನೆ ನೀಡಲಾಯಿತು. ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.ಬೀಚ್‍ನಿಂದ ಜನರನ್ನು ಸ್ಥಳಾಂತರಿಸಲು ಪೆÇಲೀಸರು ಲಾಠಿ ಬೀಸಿದರು. ಪೆÇಲೀಸರು ಮಾತನ್ನು ಯುವಕರು ಕೇಳದ ಪರಸ್ಥಿತಿಯೂ ನಿರ್ಮಾಣವಾಯಿತು. ಅಪಘಾತದಲ್ಲಿ ಗಾಯಗೊಂಡವರನ್ನು ಬೀಚ್ ಆಸ್ಪತ್ರೆ ಮತ್ತು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕೋಝಿಕ್ಕೋಡ್ ಬೀಚ್ ನಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಅಪಘಾತ; 20 ಜನರಿಗೆ ಗಾಯ
0
ಆಗಸ್ಟ್ 21, 2022
Tags