HEALTH TIPS

ಆಶ್ಚರ್ಯಕರ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದ ಲಖನೌದ 230 ವರ್ಷ ಹಳೆಯ ಸ್ಮಾರಕ ಕುಸಿತ

 

             ಲಖನೌ: ಲಖನೌದ ಪ್ರಸಿದ್ಧ, 230 ವರ್ಷ ಹಳೆಯದಾದ ಬಾರಾ ಇಮಾಂಬಾರಾ ಸ್ಮಾರಕ ಭಾರಿ ಮಳೆಯಿಂದ ಕುಸಿದಿದೆ.

            ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಎಂಜಿನಿಯರ್‌ಗಳು, ಸ್ಮಾರಕಕ್ಕೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

                 ಭಾರಿ ಮಳೆಗೆ ಸ್ಮಾರಕದ ಗೋಡೆ ಹಾಗೂ ಕಮಾನುಗಳು ಕುಸಿತವಾಗಿವೆ ಎಂದು ಪುರಾತತ್ವ ಇಲಾಖೆಯ ಲಖನೌ ವಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

                  'ಪ್ರಸಿದ್ದ ಸ್ಮಾರಕದ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರೂ ಪುರಾತತ್ವ ಇಲಾಖೆಯವರು ನಿರ್ಲಕ್ಷ್ಯ ಮಾಡಿದ್ದರು. ಕಳಪೆ ನಿರ್ವಹಣೆಯಿಂದ ಸ್ಮಾರಕ ಕುಸಿದಿದೆ' ಎಂದು ಸ್ಥಳೀಯರು ಆರೋಪಿಸಿದ್ದಾರೆ.

                 ಅವಧ್ ನವಾಬರಾಗಿದ್ದ ಅಸಫ್ ಉದ್ ದೌಲಾ ಅವರು ಬಾರಾ ಇಮಾಂಬಾರಾ ಅನ್ನು 1984 ರಲ್ಲಿ ನಿರ್ಮಾಣ ಮಾಡಿದ್ದರು. ಅಭೇದ್ಯ ಕೋಟೆಯ ರೀತಿ ಇದನ್ನು ಕಟ್ಟಲಾಗಿತ್ತು. ಅಲ್ಲದೇ ಭವ್ಯ ಮಸೀದಿ ಕೂಡ ಇಲ್ಲಿ ಇತ್ತು.

                ಈ ಬಾರಾ ಇಮಾಂಬಾರಾ ಕಟ್ಟಡವು ಕುತೂಹಲಕರ ಮತ್ತು ಆಶ್ಚರ್ಯಕರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಏಕೆಂದರೆ ಈ ಕಟ್ಟಡದ ತಾರಸಿ ತಲುಪಲು 1024 ಮಾರ್ಗಗಳಿವೆ. ಆದರೆ ಅಲ್ಲಿಗೆ ಹೋದವರು ವಾಪಸ್ ಹೊರಗೆ ಬರಲು ಕೇವಲ ಎರಡು ಮಾರ್ಗಗಳು ಮಾತ್ರ ಇವೆ.

               1780 ರ ಸಮಯದಲ್ಲಿ ಅವಧ್ ಪ್ರದೇಶದಲ್ಲಿ ಭಾರಿ ಕ್ಷಾಮ ಆವರಿಸಿದ್ದರಿಂದ ಅವಧ್ ನವಾಬ ಸ್ಥಳೀಯ ಜನರಿಗೆ ಉದ್ಯೋಗ ನೀಡಲು ಈ ಕಟ್ಟಡವನ್ನು ಕಟ್ಟಿದ್ದರು ಎಂದು ಇತಿಹಾಸ ತಿಳಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries