ತ್ರಿಶೂರ್: ಗುರುವಾಯೂರು ದೇವಸ್ಥಾನದಲ್ಲಿ ಭಾನುವಾರ ನಡೆದ ವಿವಾಹ ಸಮಾರಂಭ ದಾಖಲೆ ನಿರ್ಮಿಸಿದೆ. ದೇವಸ್ವಂ ಅಧಿಕೃತರು ನೀಡಿರುವ ಮಾಹಿತಿಯ ಪ್ರಕಾರ ಸಿಂಹ ಮಾಸದ ಮಂಗಳಕರ ದಿನದಂದು 248 ವಧು-ವರರು ವಿವಾಹಿತರಾದರು.
ಭಾನುವಾರ ಐದು ಮಂಟಪಗಳಲ್ಲಿ ವಿವಾಹ ಸಮಾರಂಭ ನಡೆಯಿತು. ಗುರುವಾಯೂರ್ ದೇವಸ್ಥಾನದಲ್ಲಿ ಮೂರು ಮದುವೆ ಮಂಟಪಗಳಿವೆ. ದಟ್ಟಣೆ ಹೆಚ್ಚಾದ ಕಾರಣ ಭಾನುವಾರ ಮತ್ತೆರಡು ತಾತ್ಕಾಲಿಕ ಮಂಟಪಗಳನ್ನು ನಿರ್ಮಿಸಲಾಯಿತು. ವಿವಾಹ ಸಮಾರಂಭಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ಅಗತ್ಯ ಅರ್ಚಕರನ್ನು ಸಹ ನಿಯೋಜಿಸಲಾಗಿತ್ತು ಎಂದು ದೇವಸ್ವಂ ಮಾಹಿತಿ ನೀಡಿದೆ.
ವಿವಾಹ ಮಂಟಪದ ಬಳಿ ಛಾಯಾಗ್ರಾಹಕರು ಸೇರಿದಂತೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದು ನಿನ್ನೆಯ ಭಾನುವಾರ ಸಿಂಹ ಮಾಸದ ಅತ್ಯಂತ ಮಂಗಳಕರ ದಿನ ಮತ್ತು ರಜಾದಿನವಾದ ಕಾರಣ ಇಷ್ಟೊಂದು ಪ್ರಮಾಣದ ವಿವಾಹ ನಡೆದಿದೆ.
ಇದೇ ವೇಳೆ, 2017 ರ ವಿವಾಹ ದಾಖಲೆಯನ್ನು ಮೀರಿಸುವ ಸೂಚನೆಗಳಿವೆ. ಆಗಸ್ಟ್ 27, 2017 ರಂದು, 277 ವಿವಾಹಗಳು ನಡೆದಿದ್ದವು. ಈ ದಾಖಲೆಯನ್ನು ಇನ್ನೂ ಮೀರಿಸಿಲ್ಲ. ದೇವಸ್ಥಾನದಲ್ಲಿ ವಿವಾಹದ ನೂಕು ನುಗ್ಗಲು ಹಿನ್ನೆಲೆಯಲ್ಲಿ ಗುರುವಾಯೂರು ನಗರದಲ್ಲಿ ಪೋಲೀಸರು ಸಂಚಾರ ವ್ಯವಸ್ಥೆ ಮಾಡಿದ್ದಾರೆ.
ಗುರುವಾಯೂರಿನಲ್ಲಿ ದಾಖಲೆಯ ವಿವಾಹ ಸಮಾರಂಭ: 248 ವಧು-ವರರು ಒಂದೇ ದಿನ ಹಸೆಮಣೆಗೆ
0
ಆಗಸ್ಟ್ 21, 2022
Tags