ಪಟ್ನಾ: ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಗಸ್ಟ್ 24ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ.
ಬಿಜೆಪಿಯೊಂದಿಗಿನ ಸ್ನೇಹ ಕಡಿದುಕೊಂಡಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಎನ್‌ಡಿಎಯಿಂದ ಹೊರಬಂದು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಹಾಘಟಬಂಧನ ಸರ್ಕಾರ ರಚಿಸಿದ್ದಾರೆ.
ಬುಧವಾರ (ಆ. 10) ನಿತೀಶ್ ಕುಮಾರ್ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ನೂತನ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಅದರಂತೆ ಆ. 24ಕ್ಕೆ ವಿಶ್ವಾಸಮತ ಯಾಚನೆ ನಿಗದಿಯಾಗಿದೆ. 165ಕ್ಕಿಂತಲೂ ಹೆಚ್ಚು ಸದಸ್ಯರ ಬಲ ಹೊಂದಿರುವ ಮಹಾಘಟಬಂಧನ ಸರ್ಕಾರ ಅನಾಯಾಸವಾಗಿ ಬಹುಮತ ಸಾಬೀತುಗೊಳಿಸುವುದು ನಿಚ್ಚಳವಾಗಿದೆ.
Nitish Kumar led government's floor test to prove majority in the Bihar Legislative Assembly will happen on August 24.
324
Reply
Copy link