ಮುಂಬೈ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶುಕ್ರವಾರ ನಡೆದ ಮೊಸರು ಕುಡಿಕೆ (ದಹಿ ಹಂಡಿ) ಉತ್ಸವದ ವೇಳೆ ಮುಂಬೈನ ವಿವಿಧೆಡೆ 24 ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ ಪಿರಮಿಡ್‌ಗಳ ಮೂಲಕ ಎತ್ತರದಲ್ಲಿರುವ ಮೊಸರು ಅಥವಾ ಬೆಣ್ಣೆಯನ್ನು ಒಳಗೊಂಡ ಮಡಕೆಯನ್ನು ತಲುಪಿ ಅದನ್ನು ಒಡೆಯುವ ಉತ್ಸವವೇ ದಹಿ ಹಂಡಿ.