ಕಾಸರಗೋಡು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾ ಕೈಗಾರಿಕೆ ಕೇಂದ್ರದಿಂದ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಾಲ ಪರವಾನಿಗೆ ಸಹಾಯಧನ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಮೇಳದ ಜಿಲ್ಲಾ ಮಟ್ಟದ ಸಮಾರೋಪವನ್ನು ಮಡಿಕೈಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಒಂದು ವರ್ಷದಲ್ಲಿ ಒಂದು ಲಕ್ಷ ಉದ್ದಿಮೆ ಯೋಜನೆಯ ಭಾಗವಾಗಿ ಎಣ್ಮಕಜೆ ಪಂಚಾಯತಿಯಲ್ಲಿ ಸಾಲ ಪರವಾನಗಿ ಸಹಾಯಧನ ಮೇಳ ಆ.ೀ 6 ರಂದು ಪ್ರಾರಂಭವಾಗಿತ್ತು.
ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳು ಆಯೋಜಿಸಿದ್ದ ಮೇಳದಲ್ಲಿ ಉದ್ಯಮಿಗಳಿಗೆ ಒಟ್ಟು 3.55 ಕೋಟಿ ರೂ.ಸಾಲ ವಿತರಿಸಲಾಗಿದೆ. 11 ಲಕ್ಷ ಸಹಾಯಧನ ಕೈಸೇರಿದೆ. ಎಲ್ಲಾ ಮೇಳಗಳಲ್ಲಿ 2536 ಮಂದಿ ಭಾಗವಹಿಸಿದ್ದರು. ಈ ಪೈಕಿ 1259 ಮಂದಿ ಸಾಲ ನೀಡುವಂತೆ ಮನವಿ ಮಾಡಿದ್ದಾರೆ. 750 ಮಂದಿ ಜನರು ಸಬ್ಸಿಡಿ ಮತ್ತು ಪರವಾನಗಿಗೆ ಸಂಬಂಧಿಸಿದಂತೆ ಈ ಬಗ್ಗೆ ಮಾಹಿತಿ ವಿವರ ಸಂಗ್ರಹಿಸಿದ್ದಾರೆ. 33 ಮಂದಿ ಜನರಿಗೆ ಸಹಾಯಧನ ಹಾಗೂ 97 ಜನರಿಗೆ ಸಾಲ ನೀಡಲಾಗಿದೆ. ಕೆ ಸ್ವಿಫ್ಟ್ ಮೂಲಕ 33 ಮಂದಿಗೆ ಉದ್ಯಮಶೀಲತೆ ಆರಂಭಿಸಲು ಅವಕಾಶ ಕಲ್ಪಿಸಲಾಯಿತು.
ಮಡಿಕೈ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಲ ಪರವಾನಗಿ ಮೇಳದ ಸಮಾರೋಪದಲ್ಲಿ ಸುಮಾರು 150 ಮಂದಿ ಭಾಗವಹಿಸಿದ್ದರು. ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಯೋಜನೆ ವಿವರಿಸಿದರು. ಪಂಚಾಯಿತಿ ಉಪಾಧ್ಯಕ್ಷ ವಿ. ಪ್ರಕಾಶನ್ ಹಾಗೂ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸತ್ಯ ಮಾತನಾಡಿದರು. ಖಾದಿ ಮಂಡಳಿ, ಕೇರಳ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬ್ಯಾಂಕ್ ಆಫ್ ಬರೋಡಾ, ಮಡಿಕೈ ಸೇವಾ ಸಹಕಾರಿ ಬ್ಯಾಂಕ್, ಮಡಿಕೈ ಗ್ರಾಮ ಪಂಚಾಯಿತಿ ಮಹಿಳಾ ಸಹಕಾರ ಸಂಘ, ಕುಟುಂಬಶ್ರೀ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ನ್ಯಾನೋ ಘಟಕ ಯೋಜನೆಗೆ ಮಾರ್ಜಿನ್ ಮನಿ ಅನುದಾನದ ಮೂಲಕ ಅರ್ಹರಿಗೆ ಸಹಾಯಧನ ವಿತರಿಸಲಾಯಿತು. ಪ್ರಕೀಯ ಪುರುಷ ಸ್ವಸಹಾಯ ಸಂಘವು ಪಿಎಂಇಜಿಪಿ ಯೋಜನೆಯ ಮೂಲಕ ಪಡೆದ ಧನಸಹಾಯವನ್ನೂ ಮೇಳದಲ್ಲಿ ವಿತರಿಸಲಾಯಿತು. ರವೀಂದ್ರ ಕಣ್ಣನಕಾಯಿ ಅವರ ನೇತೃತ್ವದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರವು ಯೋಜನಾ ವರದಿಯನ್ನು ಉಪಕ್ರಮಕ್ಕೆ ಹಸ್ತಾಂತರಿಸಿದೆ. ಉದ್ಯಮಿಗಳಿಗೆ ಕೆ.ಸ್ವಿಪ್ಟ್ ಮತ್ತು ಉದ್ಯಮ ನೋಂದಣಿಗಳನ್ನು ವಿವಿಧ ಪಂಚಾಯತ್‍ಗಳ ಇಂಟರ್ನಿಗಳು ಮಾಡಿದರು. ಎಡಿಐಒ ಕೆ.ಪಿ.ವರುಣ್ ಸ್ವಾಗತಿಸಿ, ಹೊಸದುರ್ಗ ತಾಲೂಕು ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಎನ್.ಅಶೋಕ್ ವಂದಿಸಿದರು.
ಸಾಲ ಪರವಾನಗಿ ಸಬ್ಸಿಡಿ ಮೇಳ ಮುಕ್ತಾಯ: 2536 ಮಂದಿಯಿಂದ ವಿಚಾರ ವಿನಿಮಯ
0
ಆಗಸ್ಟ್ 22, 2022