ಕಾಸರಗೋಡು: ಕೇರಳದಲ್ಲಿ ನಿರ್ಮಾಣ ವಲಯ ಮತ್ತು ಕೃಷಿ ವಲಯದ ಜೆಸಿಬಿ ಯಂತ್ರೋಪಕರಣಗಳು ಹಾಗೂ ಇತರೆ ನಿರ್ಮಾಣ ಸಲಕರಣೆಗಳ ಮಾಲೀಕರ ಏಕೈಕ ಸಂಘವಾಗಿರುವ ನಿರ್ಮಾಣ ಸಲಕರಣೆಗಳ ಮಾಲೀಕರ ಸಂಘದ ಜಿಲ್ಲಾ ಸಮಾವೇಶ ಆಗಸ್ಟ್ 30ರಂದು ಸೀತಾಂಗೋಳಿಯ ಅಲಿಯೆನ್ಸ್ ಸಭಾಂಗಣದಲ್ಲಿ ಜರುಗಲಿರುವುದಾಗಿ ಸಂಘಟನೆ ಜಿಲ್ಲಾ ಅಧ್ಯಕ್ಷ ಚಂದ್ರನ್ ಪೆರಮನ್ನೂರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಸಂಸದ ರಾಜ್ ಮೋಹನ್ ಉನ್ನಿಥಾನ್ ಒಪಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಜಿಲ್ಲೆಯ ಪ್ರತಿಷ್ಠಿತ ಟಾಟಾ ಕೋವಿಡ್ ಆಸ್ಪತ್ರೆ ಕಾಮಗಾರಿ ಸಂದರ್ಭ ಸಂಘಟನೆ ಸದಸ್ಯರು ರಾತ್ರಿಹಗಲೆನ್ನದೆ ಜಾಗಸಮತಟ್ಟುಗೊಳಿಸುವ ಪ್ರಕ್ರಿಯೆಯಲ್ಲಿ ಜೆಸಿಬಿ ಹಾಗೂ ಇತರ ಸಲಕರಣೆಯೊಂದಿಗೆ ಶ್ರಮಿಸಿದ್ದಾರೆ. ಈ ಸಂದರ್ಭ ಸಂಘಟನೆಯ 100 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ವಾಹನಗಳನ್ನು ನಿರ್ಮಾಣಕಾರ್ಯಕ್ಕೆ ನೀಡಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಹಲವಾರು ಚಾರಿಟಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಪ್ರಸ್ತುತ ಡೀಸೆಲ್ ಬೆಲೆ ಅನಿಯಂತ್ರಿತ ಏರಿಕೆ, ಯಂತ್ರೋಪಕರಣಗಳ ಬೆಲೆ, ತೆರಿಗೆ, ವಿಮೆ, ಜಿಎಸ್ ಟಿ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳವಾಗಿರುವುದರಿಂದ ಬಾಡಿಗೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಮೊಯ್ದೀನ್ ಕುಂಬಳೆ, ಕಾಸರಗೋಡು ವಲಯ ಕಾರ್ಯದರ್ಶಿ ಅಸ್ಗರ್ ಎದಿರ್ತೋಡ್, ಮುಳ್ಳೇರಿಯ ವಲಯ ಕಾರ್ಯದರ್ಶಿ ಸುಧಾಕರನ್ ಪರಶ್ಶಿನಿ ಉಪಸ್ಥಿತರಿದ್ದರು.
30ರಂದು ನಿರ್ಮಾಣ ಸಲಕರಣೆಗಳ ಮಾಲೀಕರ ಸಂಘದ ಜಿಲ್ಲಾ ಸಮಾವೇಶ
0
ಆಗಸ್ಟ್ 28, 2022
Tags