ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೀರ್ಚಾಲು ಇದರ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆಗಸ್ಟ್ 31 ಬುಧÀವಾರ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಮಹಾಜನ ಸಂಸ್ಕøತ ಶಾಲಾ ವಠಾರದಲ್ಲಿ ಜರಗಲಿರುವುದು.
ಅಂದು ಪ್ರಾತಃಕಾಲ 7 ಗಂಟೆಗೆ ದೀಪ ಪ್ರತಿಷ್ಠೆ, ಗಣಪತಿ ಹೋಮ, 8 ಗಂಟೆಗೆ ನಾಗತಂಬಿಲ ವೇದಮೂರ್ತಿ ಶಿವಶಂಕರ ಭಟ್ಟ ಪಾಂಡೇಲು ಅವರ ಪೌರೋಹಿತ್ಯದಲ್ಲಿ ನಡೆಯಲಿರುವುದು. 10.30ಕ್ಕೆ ಪ್ರತಿಭಾ ಪುರಸ್ಕಾರ, ಸತ್ಯವಿನಾಯಕ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೀರ್ಚಾಲು: ಸಾರ್ವಜನಿಕ ಶ್ರೀ ಗಣೇಶೋತ್ಸವ 31 ರಂದು
0
ಆಗಸ್ಟ್ 27, 2022