ಪೆರ್ಲ : ಪೆರ್ಲ ಸನಿಹದ ಗೋಳಿತ್ತಾರು ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾಮಂದಿರದಲ್ಲಿ 34ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ. 31ರಂದುನಡೆಯಲಿದ್ದು, ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಮಂದಿರದಲ್ಲಿ ಜರುಗಿತು.
ಸಮಿತಿ ಅಧ್ಯಕ್ಷ ಕಮಲಾಕ್ಷ ಕಾಮ, ಕಾರ್ಯದರ್ಶಿ ವಿನೀತ್ ಕಾನ, ಕೋಶಾಧಿಕಾರಿ ನವೀನ್ ನಾಯಕ್ ಇಡ್ಯಾಳ, ಜನಾರ್ದನ ರೈ ಸಏರಾಜೆ, ಗಣೇಶ್ ಗೋಳಿತ್ತಾರು, ಸುರೇಶ್ ಕಾನ, ಸಂತೋಷ್ ಗೋಳಿತ್ತಾರು, ಅಖಿಲೇಶ್ ಕಾನ, ಜಯಂತ ಪೂಜಾರಿ ಕಾನ, ಗಿರಿಜಾ ಸೇರಾಜೆ. ಪ್ರೇಮಾ ಸೇರಾಜೆ, ಯಶೋಧ ಕಾನ ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಶ್ರೀ ಸಿದ್ಧಿವಿನಾಯಕ ಮಹಿಳಾ ಸಮಾಜ ರಚಿಸಲಾಯಿತು. ಶೋಭಾ ಪೆರಿಯಡ್ಕ ಅಧ್ಯಕ್ಷೆ, ಶಾಂತಾ ಜೆ.ರೈ ಸೇರಾಜೆ ಉಪಾಧ್ಯಕ್ಷ, ಶಾರದಾ ಕಾನ ಕಾರ್ಯದರ್ಶಿ, ಗಿರಿಜ ಸೇರಾಜೆ ಜತೆ ಕಾರ್ಯದರ್ಶಿ, ಲಕ್ಷ್ಮೀ ಗೋಳಿತ್ತಾರು ಕೋಶಾಧಿಕಾರಿ ಹಾಗೂ ಲತಾ ರೈ ಸೇರಾಜೆ, ಪ್ರೇವನಾ ಸೇರಾಜೆ, ರತ್ನಾ ಕಾನ, ಯಶೋಧಾ ಕಾನ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ವಿನೋದ್ ಕಾನ ಸವಾಗತಿಸಿದರು. ಶಾಂತಾ ಜೆ. ರೈ ವಂದಿಸಿದರು.
ಗೋಳಿತ್ತಾರು: ಆಮಂತ್ರಣ ಪತ್ರಿಕೆ ಬಿಡುಗಡೆ
0
ಆಗಸ್ಟ್ 05, 2022
Tags