ಕಾಸರಗೋಡು: ಶ್ರೀ ಎಡನೀರು ಮಠದಲ್ಲಿ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆ. 31ರಂದು ಜರುಗಲಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾಣಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದಗಳೊಂದಿಗೆ ಕಾರ್ಯಕ್ರಮ ಜರುಗಲಿದೆ.
ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಬೆಳಗ್ಗೆ 7ಕ್ಕೆ ಗಣಪತಿ ಹವನ, ಗಣಪತಿ ವಿಗ್ರಹಪ್ರತಿಷ್ಠೆ, ಧ್ವಜಾರೋಹಣ, ಭಜನೆ ನಡೆಯುವುದು. 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದನ ದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕೇರಳ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಮೇಶ್ ಕಳೇರಿ ಅಧ್ಯಕ್ಷತೆ ವಹಿಸುವರು.
ಹಿಂದೂ ಐಕ್ಯವೇದಿಯ ರಾಜನ್ ಮುಳಿಯಾರ್ ಧಾರ್ಮಿಕ ಭಾಷಣ ಮಾಡುವರು. ಕೆ. ಮಾಧವ ಹೇರಳ, ವೇಣುಗೋಪಾಲ್ ಇ ಉಪಸ್ಥಿತರಿರುವರು. ಈ ಸಂದರ್ಭ ನಿವೃತ್ತ ಪ್ರಾಂಶುಪಾಲ ನಾರಾಯಣನ್ ಎ.ಎನ್ ಹಾಗೂ ಮಧುಸೂದನ್ ಪಿ.ಎನ್ ಅವರಿಗೆ ಅಭಿನಂದನೆ, ವಿವಿಧ ಸಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯುವುದು. ನಂತರ ಭಜನೆ, ಮಧ್ಯಾಹ್ನ 3ಕ್ಕೆ ಭರತನಾಟ್ಯ, ಸಂಜೆ 5.30ಕ್ಕ ಎಧ್ವಜಾವರೋಹಣ, ಶ್ರೀಗಣಪತಿ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯುವುದು.
ಎಡನೀರಿನಲ್ಲಿ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
0
ಆಗಸ್ಟ್ 30, 2022
Tags