HEALTH TIPS

ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದ ಗೌತಮ್​ ಅದಾನಿ!

 

         ನವದಹಲಿ: ಅದಾನಿ ಗ್ರೂಪ್​ನ ಚೇರ್ಮನ್ ಗೌತಮ್​ ಅದಾನಿ ಇದೀಗ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಲೂಯಿಸ್​ ವಿಟಾನ್ ಕಂಪನಿಯ ಬರ್ನಾರ್ಡ್​ ಅರ್ನಾಲ್ಟ್​ ಅವರನ್ನು ಹಿಂದಿಕ್ಕುವ ಮೂಲಕ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.

         ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ನ ಹೊಸ ಪಟ್ಟಿಯ ಪ್ರಕಾರ ಅಮೇಜಾನ್​​ನ ಜೆಫ್​ ಬೆಜೋಸ್​ ಮತ್ತು ಟೆಸ್ಲಾದ ಎಲಾನ್​ ಮಸ್ಕ್​ ಮೊದಲೆರಡು ಸ್ಥಾನದಲ್ಲಿದರೆ, ಮೂರನೇ ಸ್ಥಾನದಲ್ಲಿ ಗೌತಮ್​ ಅದಾನಿ ಇದಾರೆ.

ಅದಾನಿಯ ಒಟ್ಟು ಆಸ್ತಿ 137 ಬಿಲಿಯನ್ ಡಾಲರ್ ಆಗಿದೆ. ಬರ್ನಾರ್ಡ್​ ಅರ್ನಾಲ್ಟ್​ ಅವರ ಆಸ್ತಿ 136 ಬಿಲಿಯನ್​ ಡಾಲರ್.

          ವರದಿಗಳ ಪ್ರಕಾರ, ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ರಿಲಯನ್ಸ್​ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್​ ಅಂಬಾನಿ 91.9 ಬಿಲಿಯನ್​ ಡಾಲರ್​ನೊಂದಿಗೆ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

       ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕವು ಪ್ರಪಂಚದ ಬಿಲಿಯನೇರ್‌ಗಳ ದೈನಂದಿನ ಶ್ರೇಯಾಂಕದ ಸೂಚ್ಯಂಕವಾಗಿದ್ದು, ನ್ಯೂಯಾರ್ಕ್‌ನಲ್ಲಿನ ಪ್ರತಿ ವ್ಯಾಪಾರ ವಹಿವಾಟಿನ ದಿನದ ಕೊನೆಯಲ್ಲಿ ಅಂಕಿ-ಅಂಶವನ್ನು ನವೀಕರಿಸಲಾಗುತ್ತದೆ.

          ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ನಂತರ ಅದಾನಿ ಗ್ರೂಪ್ ಭಾರತದಲ್ಲಿ ಮೂರನೇ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಬಂದರುಗಳು, ವಿದ್ಯುತ್, ಹಸಿರು ಶಕ್ತಿ, ಅನಿಲ, ವಿಮಾನ ನಿಲ್ದಾಣಗಳು ಮುಂತಾದ ಪ್ರದೇಶಗಳಲ್ಲಿ ಈ ಸಂಸ್ಥೆ ಹೂಡಿಕೆ ಮಾಡಿದೆ. ಅದಾನಿ ಗ್ರೂಪ್ ಈಗ 5G ಸ್ಪೆಕ್ಟ್ರಮ್‌ಗಾಗಿ ಬಿಡ್ ಮಾಡಿದ ನಂತರ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸಲು ಯೋಜಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries