ಕಾಸರಗೋಡು: ಅಡೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 45ನೇ ವರ್ಷದ ಗಣೇಶೋತ್ಸವ ಸಮಾರಂಭ ಆ. 31 ಹಾಗೂ ಸೆ. 1ರಂದು ಅಡೂರು ಶ್ರೀ ಮಹಾಳಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಜರುಗಲಿರುವುದು.
31ರಂದು ಬೆಳಗ್ಗೆ 6ಕ್ಕೆ ಗಣಪತಿ ಹವನ, 8ಕ್ಕೆ ಗಣಪತಿ ಪ್ರತಿಷ್ಠೆ ನಡೆಯುವುದು. ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ನೇತೃತ್ವ ವಹಿಸುವರು. ನಂತರ ಭಜನೆ ನಡೆಯುವುದು. 11ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಶಂಕರ್ ಸಾರಡ್ಕ ಧಾರ್ಮಿಕ ಭಾಷಣ ಮಾಡುವರು. ಮಧ್ಯಾಹ್ನ 2.30ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯುವುದು. ಸೆ. 1ರಂದು ಭವ್ಯ ಘೊಷ ಯಾತ್ರೆಯೊಂದಿಗೆ ಶ್ರೀ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುವುದು.
ಅಡೂರಿನಲ್ಲಿ 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
0
ಆಗಸ್ಟ್ 30, 2022
Tags