ಬರ್ಮಿಂಗ್ಹ್ಯಾಂ: 18ನೇ ಕಾಮನ್‌ವೆಲ್ತ್ ಗೇಮ್ಸ್ ಮುಕ್ತಾಯವಾಗಿದ್ದು, ಈ ಕ್ರೀಡಾಕೂಟದಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಒಟ್ಟಾರೆಯಾಗಿ ಈ ಸಲದ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ 61 ಪದಕಗಳನ್ನು ಗಳಿಸಿದೆ.
ಜುಲೈ 28ರಂದು ಪ್ರಾರಂಭವಾದ 18ನೇ ಕಾಮನ್‌ವೆಲ್ತ್ ಗೇಮ್ಸ್ ಮುಕ್ತಾಯವಾಗಿದ್ದು, 178 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ ಸ್ಥಾನ ಪಡೆದಿದೆ. 175 ಪದಕಗಳೊಂದಿಗೆ ಇಂಗ್ಲೆಂಡ್ ದ್ವಿತೀಯ ಹಾಗೂ 92 ಪದಕಗಳೊಂದಿಗೆ ಕೆನಡ ತೃತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ. ಇಂಗ್ಲೆಂಡ್, ಕೆನಡ ಕ್ರಮವಾಗಿ 67, 57, 26 ಚಿನ್ನದ ಪದಕಗಳನ್ನು ಪಡೆದಿವೆ. ನಾಲ್ಕನೇ ಸ್ಥಾನ ಪಡೆದಿರುವ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗಳಿಸಿದೆ.
ಕಳೆದ ಕ್ರೀಡಾಕೂಟದಲ್ಲಿ ಭಾರತಕ್ಕೆ ಶೂಟಿಂಗ್ನಲ್ಲಿ 135 ಪದಕಗಳು ಬಂದಿದ್ದವು. ಆದರೆ ಈ ಸಲ ಶೂಟಿಂಗ್ ರದ್ದು ಮಾಡಿದ್ದರಿಂದ ಭಾರತಕ್ಕೆ ಪದಕಗಳ ಸಂಖ್ಯೆ ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ. 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಸಾಧನೆ ಇದುವರೆಗಿನ ಉತ್ಕೃಷ್ಠ ಸಾಧನೆಯಾಗಿದೆ. ಆ ಕ್ರೀಡಾಕೂಟದಲ್ಲಿ ಭಾರತ 38 ಚಿನ್ನದ ಪದಕಗಳನ್ನು ಸೇರಿ ಒಟ್ಟು 101 ಪದಕಗಳನ್ನು ಗಳಿಸಿತ್ತು.