ತ್ರಿಶೂರ್: 59ನೇ ವಯಸ್ಸಿನಲ್ಲಿ ತಾಯಿಗೆ ಹೊಸ ಬದುಕು ನೀಡಿದ ಮಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾಳೆ.
ಪತಿ ತೀರಿಕೊಂಡ ನಂತರ ಜೀವನದಲ್ಲಿ ಒಂಟಿಯಾಗಿದ್ದ ತಾಯಿಗೆ ಸ್ವಂತ ಮಗಳೇ ವರನನ್ನು ಕಂಡುಕೊಂಡಿದ್ದಾಳೆ. ಚಿನ್ನದ ತಾಳಿ ಕಟ್ಟಿದ ಬಳಿಕ ಪುತ್ರಿ ತನ್ನ ತಾಯಿಯ ಕೈ ಹಿಡಿದು ವರನಿಗೆ ಹಸ್ತಾಂತರಿಸಿದಳು. 59 ವರ್ಷದ ರತಿ ಮೆನನ್ ಮತ್ತು 63 ವರ್ಷದ ದಿವಾಕರನ್ ಅವರ ವಿವಾಹವು ಸಿಂಹ ತಿಂಗಳ 1 ರಂದು ತಿರುವಂಬಾಡಿ ದೇವಸ್ಥಾನದಲ್ಲಿ ನಡೆಯಿತು.
ರತಿ ಮೆನನ್ ಕೋಲಾಜಿ ಮೂಲದವರು. ದಿವಾಕರನ್ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ. ಪತ್ನಿ ತೀರಿಕೊಂಡಿದ್ದು ಒಂಟಿ ಜೀವನ ನಡೆಸುತ್ತಿದ್ದರು. ಇಬ್ಬರಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ತಾಯಿ ಒಂಟಿಯಾಗಿರುವುದು ಕಳವಳವನ್ನುಂಟುಮಾಡಿದ್ದು, ಮರು ವಿವಾಹವಾಗಲು ನಿರ್ಧರಿಸಿದ್ದಾಗಿ ರತಿ ಪುತ್ರಿ ಪ್ರಸೀತಾ ತಿಳಿಸಿದ್ದಾರೆ. ನನ್ನ ತಂದೆ ತೀರಿಕೊಂಡ ಒಂದು ವರ್ಷದ ನಂತರ ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು. ಕೆಲಸ ಮತ್ತು ಕುಟುಂಬದ ಮಧ್ಯೆ, ಅವರೊಂದಿಗೆ ಬಂದು ಉಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ತನ್ನ ತಾಯಿಗೆ ಮರು ವಿವಾಹವಾಗಲು ಒಡಂಬಡಿಸಿದೆ ಎಂದು ಪುತ್ರಿ ತಿಳಿಸಿದ್ದಾರೆ. ಇದಕ್ಕೆ ಪತಿ ವಿನು ಕೂಡ ಬೆಂಬಲ ನೀಡಿದ್ದಾರೆ ಎಂದು ಪ್ರಸೀತಾ ಹೇಳಿದ್ದಾರೆ.
ನಂತರ ಅವರು ದಿವಾಕರನ್ ಅವರನ್ನು ಸಂಪರ್ಕಿಸಿದರು. ಅವರ ಮಗಳೂ ಒಪ್ಪಿ ಮದುವೆಯಾದರು. ಸಾಮಾನ್ಯವಾಗಿ ಚಿಕ್ಕಪ್ಪಂದಿರೇ ಮದುವೆಗೆ ಕೈ ಹಿಡಿಯುತ್ತಾರೆ. ಆದರೆ ಇಲ್ಲಿ ಮಗಳೇ ತಾಯಿಯ ಕೈ ಹಿಡಿದಿದ್ದಾಳೆ. ಹಿರಿಯರೂ ಅನುಮತಿಸಿರುವರು ಎಂದು ಪ್ರಸೀತಾ ಹೇಳಿದರು.
ನವವರನಿಗೆ ಕೈನೀಡಿ ತಾಯಿಯನ್ನೊಪ್ಪಿಸಿದ ಪುತ್ರಿ: 59 ರ ಹರೆಯದಲ್ಲಿ ತಾಯಿಗೆ ಹೀಗೊಂದು ಉಡುಗೊರೆ
0
ಆಗಸ್ಟ್ 20, 2022