HEALTH TIPS

5 ಮನೆ, ಈಜುಕೊಳ, ಥಿಯೇಟರ್​, ಬಾರ್​, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್​

 

            ಭೋಪಾಲ್​: ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಸರ್ಕಾರಿ ಅಧಿಕಾರಿಯ ಮನೆಯನ್ನು ನೋಡಿ ಇಒಡಬ್ಲ್ಯು ಅಧಿಕಾರಿಗಳೇ ಬೆಸ್ತುಬಿದ್ದಿದ್ದಾರೆ.

ಏಕೆಂದರೆ, ಯಾವ ಫೈವ್​​ ಸ್ಟಾರ್​ ಹೋಟೆಲ್​ಗೂ ಕಡಿಮೆ ಇಲ್ಲ ಅನ್ನುವಂತಿದೆ ಅಧಿಕಾರಿಯ ಐಷಾರಾಮಿ ನಿವಾಸ.

                       ಒಂದು ಈಜುಕೊಳ, ಒಂದು ದೊಡ್ಡ ಸ್ನಾನದ ತೊಟ್ಟಿ, ಮಿನಿ ಬಾರ್​ ಮತ್ತು ಒಂದು ಹೋಮ್​​ ಥಿಯೇಟರ್​ ಸೇರಿದಂತೆ ಲಕ್ಷುರಿ ಹೋಟೆಲ್​ನಲ್ಲಿರುವ ಇರುವ ಎಲ್ಲ ಸೌಲಭ್ಯಗಳನ್ನು ತಮ್ಮ ಮನೆಯಲ್ಲೇ ಅಧಿಕಾರಿ ಮಾಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಪಟಿಯಾಲದಲ್ಲಿ ಈ ಐಷಾರಾಮಿ ಮನೆ ಇದೆ. ಇದಿಷ್ಟು ಮಧ್ಯಪ್ರದೇಶದ ಆರ್​ಟಿಒ ಅಧಿಕಾರಿ ಸಂತೋಷ್​ ಪೌಲ್​ ಎಂಬುವರಿಗೆ ಸೇರಿದ್ದಾಗಿದೆ.


                     ಅಕ್ರಮ ಆಸ್ತಿ ಸಂಪದಾನೆ ಆರೋಪ ಹಿನ್ನೆಲೆಯಲ್ಲಿ ಜಬಲ್ಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದಾಗ ಸರ್ಕಾರಿ ಅಧಿಕಾರಿಯ ಕರ್ಮಕಾಂಡ ಬಯಲಾಗಿದೆ. ಮನೆಯಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಸಾಕ್ಷಿಯಾಗಿ ದಾಳಿಯ ವೇಳೆ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಮನೆಗಳು ಅಧಿಕಾರಿಗೆ ಸಂಬಂಧಿಸಿದ್ದಾಗಿದೆ.

              ಇಒಡಬ್ಲ್ಯು ಅಧಿಕಾರಿಗಳ ದಾಳಿಯ ವೇಳೆ 15 ಲಕ್ಷ ರೂಪಾಯಿ ನಗದು, ದುಬಾರಿ ಚಿನ್ನಾಭರಣಗಳು, ಲಕ್ಷುರಿ ಕಾರುಗಳು, ಮನೆಗಳು ಮತ್ತು ಫಾರ್ಮ್​ ಹೌಸ್​ಗಳು ಪತ್ತೆಯಾಗಿವೆ. ಅಧಿಕಾರಿ ಸಂತೋಷ್​ ಪೌಲ್​​ ಪತ್ನಿ ರೇಖಾ ಕೂಡ ಸರ್ಕಾರಿ ಉದ್ಯೋಗಿಯಾಗಿದ್ದು, ಗಂಡನ ಕಚೇರಿಯಲ್ಲೇ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾಳೆ.

                ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಯ ಆದಾಯದ ಮೂಲಗಳಿಗೆ ಹೋಲಿಸಿದರೆ ಶೇ. 650 ರಷ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
Swimming pool, jacuzzi and a mini bar this is not a description of a 5-star resort but are among the many luxurious features of the palatial house of a government officer in Jabalpur @ndtv @ndtvindia
345
Reply
Copy link

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries