ಮುಂಬೈ: ದೀಪಾವಳಿ ವೇಳೆಗೆ ಮೆಟ್ರೋ ನಗರಗಳಲ್ಲಿ 5 ಜಿ ಸೇವೆ ಲಭ್ಯವಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.
5ಜಿ ಟೆಲಿಫೋನಿ ಸೇವೆಗಳನ್ನು ನಿಯೋಜಿಸುವುದಕ್ಕಾಗಿ ಅಂಬಾನಿ ಸೋಮವಾರದಂದು 2 ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಘೋಷಿಸಿದರು.
ದೇಶದ ಅತಿ ದೊಡ್ಡ ಆಪರೇಟರ್ ಆಗಿರುವ ಜಿಯೋ, ಈಗಿರುವ 4 ಜಿ ನೆಟ್ವರ್ಕ್ ನ್ನು ನವೀಕರಿಸುವ ಬದಲು ಸ್ವತಂತ್ರ 5G ಸ್ಟಾಕ್ ನ್ನು ನಿಯೋಜಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ 45 ನೇ ಎಜಿಎಂ ನಲ್ಲಿ ಅಂಬಾನಿ ಹೇಳಿದ್ದಾರೆ.
ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಗಳಲ್ಲಿ 5 ಜಿ ಸೇವೆ ಜಾರಿಗೆ ಬರಲಿದೆ ಎಂದು ಅಂಬಾನಿ ತಿಳಿಸಿದ್ದು, 2023 ರ ವೇಳೆಗೆ 18 ತಿಂಗಳಲ್ಲಿ ಇಡೀ ಭಾರತದ ನಗರಗಳಲ್ಲಿ 5 ಜಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.