ನವದೆಹಲಿ: ಜಾಗತಿಕವಾಗಿ ಬಳಕೆಯಾಗುತ್ತಿರುವ ಶೇ 60ರಷ್ಟು ಲಸಿಕೆಯನ್ನು ಭಾರತವೇ ಉತ್ಪಾದಿಸಿ ಪೂರೈಕೆ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದರು.
ಭಾರತವು ಲಾಕ್‌ಡೌನ್ ಸಂದರ್ಭದಲ್ಲಿಯೂ ಕೋವಿಡ್-19 ಲಸಿಕೆ ಉತ್ಪಾದನೆ ಮಾಡಿದೆ.
ಪ್ರತಿಯೊಬ್ಬ ನಾಗರಿಕನಿಗೂ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿನಿಯೋಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಜ್ಜನ್ ಸಿಂಗ್ ಯಾದವ್ ಅವರು ಬರೆದಿರುವ 'ವ್ಯಾಕ್ಸಿನ್ ಗ್ರೋಥ್ ಸ್ಟೋರಿ' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
'ದಶಕಗಳಿಂದ ಭಾರತವು ಲಸಿಕೆ ಉತ್ಪಾದನೆ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ಸಲ್ಲಿಸಿದೆ. ವಿಶ್ವದಾದ್ಯಂತ ಬಳಕೆಯಲ್ಲಿರುವ ಲಸಿಕೆಗಳ ಪೈಕಿ ಶೇ 60ರಷ್ಟನ್ನು ಭಾರತವೇ ಉತ್ಪಾದಿಸಿ ಪೂರೈಕೆ ಮಾಡುತ್ತಿದೆ' ಎಂದು ಅವರು ಹೇಳಿದರು.
ಭಾರತದಲ್ಲಿ ಈವರೆಗೆ 200 ಕೋಟಿಗೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ.