ಕೊಚ್ಚಿ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ ₹60 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಜಿಂಬಾಬ್ವೆಯಿಂದ ದೋಹಾದ ಮೂಲಕ ಇಲ್ಲಿಗೆ ಬಂದಿದ್ದ ಪಾಲಕ್ಕಾಡ್ ನಿವಾಸಿ ಮುರಳೀಧರನ್ ನಾಯರ್ ಎಂಬುವವರ ಬ್ಯಾಗ್‌ನಲ್ಲಿ ಮೆಥಾ ಕ್ವಿನಾಲ್ ಮಾದಕ ವಸ್ತು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.