ತಿರುವನಂತಪುರ: ಅಂದಾಜಿನ ಪ್ರಕಾರ ರಾಜ್ಯದಲ್ಲಿ 64,006 ಕಡು ಬಡವರಿದ್ದಾರೆ. ಇವರಲ್ಲಿ ಹೆಚ್ಚಿನವರು ಮಲಪ್ಪುರಂ ಜಿಲ್ಲೆಯವರು. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 8553 ಬಡವರಿದ್ದಾರೆ. ತಿರುವನಂತಪುರಂ ಜಿಲ್ಲೆ ಮಲಪ್ಪುರಂ ಜಿಲ್ಲೆಯ ಬಳಿಕದ ಸ್ಥಾನದಲ್ಲಿದೆ.
ಕುಟುಂಬಶ್ರೀಯ ಬೆಂಬಲದೊಂದಿಗೆ, ಕಡು ಬಡತನ ನಿರ್ಮೂಲನೆಗಾಗಿ ಸ್ಥಳೀಯಾಡಳಿತ ಇಲಾಖೆಯು ಸಿದ್ಧಪಡಿಸಿದ ಮೂರು ಹಂತದ ಯೋಜನೆಯಲ್ಲಿ ಕಡು ಬಡವರನ್ನು ಗುರುತಿಸುವ ಸಮೀಕ್ಷೆಯು ಈ ಅಂಕಿಅಂಶ ಬಿಡುಗಡೆಗೊಳಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳು ನಡೆಸಿದ ರಾಜ್ಯಮಟ್ಟದ ಎಣಿಕೆಯಲ್ಲಿ ಕಡು ಬಡತನದಲ್ಲಿ ಬದುಕುತ್ತಿರುವವರ ಸಂಖ್ಯೆ ಪತ್ತೆಯಾಗಿದೆ.
ರಾಜ್ಯದ 64,006 ಕಡು ಬಡವರಲ್ಲಿ 12,763 ಪರಿಶಿಷ್ಟ ಜಾತಿ ಮತ್ತು 3021 ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಕಡು ಬಡತನದಲ್ಲಿರುವ ಜನರ ಸಂಖ್ಯೆಯನ್ನು ಗಮನಿಸಿದರೆ, ತಿರುವನಂತಪುರಂ ಜಿಲ್ಲೆ 7278 ಜನರೊಂದಿಗೆ ಮಲಪ್ಪುರಂ ನಂತರ ಎರಡನೇ ಸ್ಥಾನದಲ್ಲಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಅತಿ ಕಡಿಮೆ ಬಡತನ ಪೀಡಿತರಿದ್ದಾರೆ.
ಕುಟುಂಬಶ್ರೀ ಮೇಲ್ವಿಚಾರಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಕಡು ಬಡತನ ನಿರ್ಮೂಲನೆ ಮಾಡುವುದು ಸ್ಥಳೀಯಾಡಳಿತ ಇಲಾಖೆಯ ಉದ್ದೇಶವಾಗಿದೆ. ಇದಕ್ಕಾಗಿ ಸಾಕಷ್ಟು ಆಹಾರ ವಿತರಣೆ ಸೇರಿದಂತೆ ತಕ್ಷಣವೇ ಅನುμÁ್ಠನಗೊಳಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ವಸತಿ ರಹಿತÀರಿಗೆ ಪುನರ್ವಸತಿ ಮತ್ತು ದೀರ್ಘಾವಧಿ ಯೋಜನೆಗಳ ಜೊತೆಗೆ ಅಲ್ಪಾವಧಿ ಯೋಜನೆಗಳನ್ನೂ ಪ್ರಾರಂಭಿಸಿ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಮೂರು ಹಂತದ ವ್ಯವಸ್ಥೆಯೊಂದಿಗೆ ಮಧ್ಯಪ್ರವೇಶಿಸಲು ನಿರ್ಧರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ನಿಧಿಯಿಂದ ಹಣವನ್ನು ಖರ್ಚು ಮಾಡುವ ಮೂಲಕ ಕಲ್ಯಾಣ ಯೋಜನೆಯನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ಹೊಂದಿವೆ.
ರಾಜ್ಯದಲ್ಲಿ 64,006 ಮಂದಿ ಜನರು ಅತ್ಯಂತ ಬಡವರು: ಮಲಪ್ಪುರಂನಲ್ಲಿ ಅತಿ ಹೆಚ್ಚು ಮತ್ತು ಕೊಟ್ಟಾಯಂನಲ್ಲಿ ಅತಿ ಕಡಿಮೆ: ಅಂಕಿಅಂಶ
0
ಆಗಸ್ಟ್ 12, 2022
Tags