ತಿರುವನಂತಪುರ: ರಸ್ತೆ ನಿಯಮಗಳನ್ನು ಉಲ್ಲಂಘಿಸುವವರನ್ನು ಹಿಡಿಯಲು ಮೋಟಾರು ವಾಹನ ಇಲಾಖೆ ‘ಸುರಕ್ಷಿತ ಕೇರಳ ಯೋಜನೆ’ಗೆ ಮುಂದಾಗಿದೆ. ಕಾನೂನು ಉಲ್ಲಂಘಿಸುವವರ ಮೇಲೆ ನಿಗಾ ಇಡಲು 225 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿರುವ 675 ಎಐ ಕ್ಯಾಮೆರಾಗಳು ಸೇರಿದಂತೆ ಒಟ್ಟು 726 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಮುಂದಿನ ತಿಂಗಳ ಆರಂಭದಿಂದ ದಂಡ ವಸೂಲಿ ಮಾಡಲಾಗುವುದು ಎಂದು ಸಾರಿಗೆ ಆಯುಕ್ತ ಎಸ್.ಶ್ರೀಜಿತ್ ತಿಳಿಸಿದ್ದಾರೆ.
ತಿರುವನಂತಪುರ- 81, ಎರ್ನಾಕುಳಂ- 62, ಕೋಝಿಕ್ಕೋಡ್- 60 ಎಂಬಂತೆ ಪ್ರತಿ ಜಿಲ್ಲೆಗಳಲ್ಲಿ ಬೇಡಿಕೆಗೆ ಅನುಸರಿಸಿ ಕ್ಯಾಮರಾ ಸ್ಥಾಪಿಸಲಾಗುವುದು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಹೊರತುಪಡಿಸಿ, ಇತರ ಪ್ರಮುಖ ರಸ್ತೆಗಳಲ್ಲಿಯೂ ಕ್ಯಾಮೆರಾ ಸ್ಥಾಪಿಸಲಾಗುವುದು. ಅಕ್ರಮ ಪಾರ್ಕಿಂಗ್ ಪತ್ತೆಗೆ 25 ಹಾಗೂ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಪತ್ತೆಗೆ 18 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.
675 ಎಐ. ಕ್ಯಾಮೆರಾಗಳು ಆರಂಭದಲ್ಲಿ ಹೆಲ್ಮೆಟ್, ಸೀಟ್, ಬೆಲ್ಟ್ ಮತ್ತು ಮೊಬೈಲ್ ಪೋನ್ ಬಳಕೆಯನ್ನು ಪರಿಶೀಲಿಸುತ್ತವೆ. ಉಲ್ಲಂಘನೆ ಪತ್ತೆಯಾದರೆ, ವಾಹನ ಮಾಲೀಕರ ಮೊಬೈಲ್ ಫೆÇೀನ್‍ಗೆ ಎರಡನೇ ದಿನ ಮತ್ತು ನಂತರ ಅಂಚೆ ಮೂಲಕ ದಂಡದ ಅಧಿಸೂಚನೆಯನ್ನು ಕಳುಹಿಸಲಾಗುತ್ತದೆ. ವಿಮೆ ಸೇರಿದಂತೆ ದಾಖಲೆಗಳ ಸಿಂಧುತ್ವವನ್ನು ಪರಿಶೀಲಿಸಿದ ನಂತರ ದಂಡವನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುತ್ತದೆ.
ಕ್ಯಾಮರಾದಲ್ಲಿ ಸಿಕ್ಕಿಬಿದ್ದವರಿಗೆ ಎಷ್ಟು ದಂಡ ಹೇರಲಾಗುತ್ತದೆ?:
ಹೆಲ್ಮೆಟ್ ಧರಿಸದ ಮುಂಭಾಗ ಮತ್ತು ಹಿಂಭಾಗ ಪ್ರಯಾಣಿಕರಿಗೆ ಕಡ್ಡಾಯ, ದಂಡ - 500
ಸೀಟ್ ಬೆಲ್ಟ್ ಧರಿಸದೇ ಇರುವವರು ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಕಡ್ಡಾಯ, ದಂಡ- 500
ಡ್ರೈವಿಂಗ್ ಸಮಯದಲ್ಲಿ ಸೆಲ್ ಫೆÇೀನ್ ಬಳಸಿದರೆ ದಂಡ- ಪರವಾನಗಿ ರದ್ದು
ದಂಡ ವಸೂಲಿ ವಿಧಾನ
ಎರಡನೇ ದಿನ ಮೊಬೈಲ್ ಗೆ ಸಂದೇಶ ಬರುತ್ತದೆ
ನಂತರ ಅಂಚೆ ಮೂಲಕವೂ ಬರಲಿದೆ
ಅತಿಯಾದ ವೇಗಕ್ಕೂ ಬೀಳಲಿದೆಯೇ ಕಡಿವಾಣ?:
ಅತಿ ವೇಗದ ವಾಹನ ಸಂಚಾರವನ್ನು ಎಐ ಕ್ಯಾಮರಾ ಪತ್ತೆಹಚ್ಚುವುದಿಲ್ಲ.
ಪ್ರಸ್ತುತ ಇರುವ ವೇಗ ಪರಿಶೀಲನೆ ಕ್ಯಾಮೆರಾಗಳು ಮುಂದುವರಿಯುತ್ತವೆ
ಹೊಸ ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತದೆ. ದಂಡ – 1500 ರೂ. ಇರಲಿದೆ.
ರಾಜ್ಯಾದ್ಯಂತ 675 ನೂತನ ತಂತ್ರಜ್ಞಾನದ ಕ್ಯಾಮೆರಾಗಳು, ಮೊಬೈಲ್‍ಗಳಿಗೆ ಪಠ್ಯ ಸಂದೇಶ ಮತ್ತು ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇಲ್: ರಸ್ತೆ ಸುರಕ್ಷಿತೆಗೆ ಹೊಸ ಕ್ಯಾಮರಾಗಳ ಅಳವಡಿಕೆ
0
ಆಗಸ್ಟ್ 15, 2022
Tags