ಕಾಸರಗೋಡು: ರಾಷ್ಟ್ರದ 75 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಹೇಳಿದರು. ಸ್ವಾತಂತ್ಯ ದಿನಾಚರಣೆಯ ಭಾಗವಾಗಿ ಜಿಲ್ಲಾಧಿಕಾರಿ ಕಛೇರಿಯ ಮಿನಿ ಸಭಾಂಗಣದಲ್ಲಿ ಸೇರಿದ ಉದ್ಯೋಗಸ್ಥರ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು.
ಆಗಸ್ಟ್ 15 ರಂದು ಬೆಳಗ್ಗೆ ವಿದ್ಯಾನಗರ ಕಾಸರಗೋಡು ಮುನ್ಸಿಪಲ್ ಮೈದಾನದಲ್ಲಿ ನಡೆಯುವ ಪÀಥ ಸಂಚಲನದಲ್ಲಿ ಜಿಲ್ಲೆಯ ನೇತೃತ್ವವನ್ನು ವಹಿಸಿರುವ ಪುರಾವಸ್ತು, ಪುರಾತನ ರೇಖೆಗಳು, ಬಂದರುಗಳು, ವಸ್ತು ಸಂಗ್ರಹಾಲಯ ವಿಭಾಗದ ಸಚಿವ ಅಹಮ್ಮದ್ ದೇವರ್ ಕೋವಿಲ್ ಗೌರವ ವಂದನೆ ಸ್ವೀಕರಿಸುವರು. ಜಿಲ್ಲಾ ಸಶಸ್ತ್ರ ಪೋಲೀಸ್ , ಆರ್ಮ್ ಡ್ ರಿಸರ್ವ್ ಪೋಲೀಸ್ , ಲೋಕಲ್ ಪೋಲೀಸ್, ವನಿತಾ ಪೋಲೀಸ್, ಎಕ್ಸೈ ಸ್ , ಸ್ಟೂಡೆಂಟ್ ಪೋಲೀಸ್, ಎನ್ ಸಿ ಸಿ ಎಂಬೀ ವಿಭಾಗದವರು ಪಥ ಸಂಚಲನದಲ್ಲಿ ಭಾಗವಹಿಸುವರು. 1 ಗಂಟೆಯ ಸಾಂಸ್ಕøತಿಕ ಕಾರ್ಯಕ್ರಮಗಳು ಸ್ವಾತಂತ್ಯ ದಿನಾಚರಣೆಯ ಭಾಗವಾಗಿ ನಡೆಯಲಿರುವುದು.
ಸಭೆಯಲ್ಲಿ ಎ ಡಿ ಎಂ ಎ ಕೆ ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ ಆರ್ ಮೇಘ ಶ್ರೀ , ಆರ್ ಡಿ ಒ ಅತುಲ್ ಸ್ವಾಮಿನಾಥನ್, ಡಿ ವೈ ಎಸ್ ಪಿ ಎ ಸತೀಶ್ ಕುಮಾರ್ ವಿವಿಧ ಇಲಾಖೆಗಳ ಗಣ್ಯರು ಮೊದಲಾದವರು ಭಾಗವಹಿಸಿದ್ದರು.
75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
0
ಆಗಸ್ಟ್ 02, 2022