HEALTH TIPS

ತುಳು ಅಕಾಡೆಮಿ ಯಿಂದ ಸಂಭ್ರಮದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ


                      ಮಂಜೇಶ್ವರ:  75 ನೇ ಸ್ವಾತಂತ್ರ ಆಚರಣೆಯನ್ನು ದೇಶದುದ್ದಗಲಕ್ಕೂ  ಆಚರಿಸುವ  ಈ ಸಂದರ್ಭದಲ್ಲಿ ಕೇರಳ ತುಳು ಅಕಾಡೆಮಿಯ ಹೊಸಂಗಡಿ ಅಂಗಡಿಪದವಿನಲ್ಲಿರುವ ತುಳು ಭವನದಲ್ಲಿ   ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
      ಬೆಳಗ್ಗೆ  9.ಕ್ಕೆ ಅಕಾಡೆಮಿ ಅಧ್ಯಕ್ಷ  ಎಂ.ಉಮೇಶ್  ಸಾಲಿಯಾನ್  ಧ್ವಜಾರೋಹಣಗೈದರು.
ಬಳಿಕ ತುಳು ಭವನದ ರಾಮಣ್ಣ ರೈ ಸ್ಮಾರಕ ಹಾಲ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್ ಸಾಲಿಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಹಿರಿಯ  ಯಕ್ಷಗಾನ ಕಲಾವಿದರಾದ. ನರಸಿಂಹ ಬಲ್ಲಾಳ್, ಕಲಾವಿದರ ಸಂಘಟನೆ ಸವಾಕ್ ನ ಅಧ್ಯಕ್ಷರಾದ  ದಯಾಪ್ರಸಾದ್ ಪಿಲಿಕುoಜೆ, ರಂಗ ಭೂಮಿ ಕಲಾವಿದರೂ ಚಿನ್ಮಯ ವಿದ್ಯಾಲಯದ ಮಾಜಿ ಪ್ರಾಂಶುಪಾಲ ಪುಷ್ಪರಾಜ ಮಾಸ್ತರ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮಂಜೇಶ್ವರದ ಹಿರಿಯ ಸ್ವಾತಂತ್ರ್ಯ ಯೋಧರಾದ ದಿ. ಡಾ. ಎ.. ಸುಬ್ಬರಾವ್, ದಿ. ಮಂಜು ಬಿ. ಮಂಜೇಶ್ವರ, ದಿ. ರಾಮ ನಾಯಕ ರವರ ತ್ಯಾಗವನ್ನು ಸ್ಮರಿಸಲಾಯಿತು.  ಅಕಾಡೆಮಿ ಸದಸ್ಯರಾದ  ರಾಮಕೃಷ್ಣ ಕಡಂಬಾರ್ ಈ ಸ್ವಾತಂತ್ರ್ಯ ಹೋರಾಟಗಾರರ ಸಮಗ್ರ ಪರಿಚಯವನ್ನು ಸಭೆಗೆ ನೀಡಿದರು. ದಿ.ಮಂಜು ಬಿ ಮಂಜೇಶ್ವರ ರವರ ಪುತ್ರ  ಉದಯ ಬಿ ಎಂ ಹಾಗೂ ದಿ.ರಾಮ ನಾಯಕ್ ಪುತ್ರ  ಹರೀಶ್ಚಂದ್ರ ಎಂ ರವರು ಮೃತ ಸ್ವಾತಂತ್ರ್ಯ ಸೇನಾನಿಗಳ ಪರವಾಗಿ ಸ್ಮರಣಿಕೆ ಸ್ವೀಕರಿಸಿದರು.

     ಬಳಿಕ  ತುಳು ದೇಶಿಯ ಪ್ರಶಸ್ತಿ ವಿಜೇತ ಚಲನಚಿತ್ರ "ಜೀಟಿಗೆ " ಯ ಕಥಾ ರಚನೆಕಾರಾರೂ ನಿರ್ದೇಶಕರೂ ಆದ ಸಂತೋಷ್ ಮಾಡ
 ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಚಿತ್ರಕ್ಕೆ ಸಿಕ್ಕ ದೇಶಿಯ ಪ್ರಶಸ್ತಿ ಸಮಸ್ತ ತುಳು ಅಭಿಮಾನಿಗಳ ಆಶೀರ್ವಾದದ ಫಲ ಎಂದರು. ಮುಂದೆಯೂ ತುಳು ಭಾಷೆ, ಚಲನಚಿತ್ರದ ಅಭಿವೃದ್ಧಿಯಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
      ಅಧ್ಯಕ್ಷತೆ ವಹಿಸಿ   ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್ ಸಾಲಿಯಾನ್ ರವರು  ಆಧುನಿಕ ಭಾರತದಲ್ಲಿ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವಜನತೆ ಮಾಡಬೇಕಾದ ಅನಿವಾರ್ಯತೆ ಯನ್ನು ತಿಳಿಸಿದರು. ಹಿರಿಯ ಸ್ವಾತಂತ್ರ್ಯ ಸೇನಾನಿ ಗಳನ್ನು ಸ್ಮರಿಸಿದರು.
       ಸಮಾರಂಭದಲ್ಲಿ    ಪ್ರಭಾಕರ ಶೆಟ್ಟಿ,  ಕಮಲಾಕ್ಷ ಕನಿಲ,  ಗಂಗಾಧರ್ ದುರ್ಗಿಪಳ್ಳ,  ಕೃಷ್ಣ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಬಿ. ಸ್ವಾಗತಿಸಿ, ಅಕಾಡೆಮಿ ಸದಸ್ಯೆ ಭಾರತೀ ಬಾಬು ವಂದಿಸಿದರು.  ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries