ಬದಿಯಡ್ಕ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀಮದ್ ಎಡನೀರು ಮಠದ ಮುಂಭಾಗದಲ್ಲಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ರಾಷ್ಟ್ರದ್ವಜಾರೋಹಣಗೈದರು. ಈ ಸಂದರ್ಭ ಮಾತನಾಡಿದ ಅವರು ರಾಷ್ಟ್ರ ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಪ್ರತಿಯೊಬ್ಬರಲ್ಲೂ ರಾಷ್ಟ್ರ ಸಮರ್ಪಣೆಯ ಭಾವ ಪುಟಿದೇಳಬೇಕು. ರಾಷ್ಟ್ರ ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ಬಗ್ಗೆ ಅಭಿಮಾನವಿರಬೇಕು ಎಮದು ತಿಳಿಸಿದರು.
ಸ್ಥಳೀಯ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.