ಮಂಜೇಶ್ವರ : ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆಯಲ್ಲಿ 75 ನೇ ವರ್ಷದ ಭಾರತದ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು .
ಶಾಲಾ ಸಂಚಾಲಕಿ ಪ್ರೇಮ ಕೆ ಭಟ್ ತೊಟ್ಟೆತ್ತೋಡಿ ಧ್ವಜಾರೋಹಣ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ಸ್ಥಾನ ವಹಿಸಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಮಕ್ಕಳು ಕಟಿಬದ್ದರಾಗಿರಬೇಕೆಂದು ಕರೆ ನೀಡಿದರು.
ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಭೂ ಸೇನಾ ಯೋಧ ನೈಬ್ ಸುಬೇದಾರ್ ಆನಂದ ಡಿ ಶೆಟ್ಟಿಯವರು ಮಾತನಾಡಿ, ಸ್ವಾತಂತ್ರ ಹೋರಾಟದ ದಿನಗಳು ಮತ್ತು ಸ್ವತಂತ್ರ ಭಾರತದ ಕನಸುಗಳ ಕುರಿತಾಗಿ ಬೆಳಕು ಚೆಲ್ಲಿದರು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಮತ್ತು ವಾರ್ಡ್ ಸದಸ್ಯೆ ರುಖಿಯ ಸಿದ್ದಿಕ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಾಯುಸೇನೆಯ ಅಧಿಕಾರಿ ಸುಜಿತ್ ಶೆಟ್ಟಿಯವರು ಮಾತನಾಡಿ ಯುವ ಜನಾಂಗದವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಮತ್ತೋರ್ವ ಅತಿಥಿ ಶ್ರೀನಿವಾಸ ಮೆಡಿಕಲ್ ಕಾಲೇಜು ಮುಕ್ಕ ಇಲ್ಲಿಯ ಪ್ರಾಧ್ಯಾಪಕಿ ಸ್ವಾತಿ ಶೆಟ್ಟಿ ಶುಭ ಹಾರೈಸಿದರು.
ಇದೇ ಸಂದರ್ಭಲ್ಲಿ 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ದಿ. ಕಾನ ನಾರಾಯಣ ಭಟ್ಟ ಮತ್ತು ದಿ.ಗೌರಿ ಅಮ್ಮ ಇವರ ಸ್ಮರಣಾರ್ಥ ಅವರ ಪುತ್ರ ಕಾನ ಶಿವಶಂಕರ್ ಇವರು ಕೊಡಮಾಡುವ ಹಾಗೂ ತೊಟ್ಟೆತ್ತೋಡಿ ದಿ. ನಾರಾಯಣ ಭಟ್ ಮತ್ತು ದಿ.ಕೇಶವ ಭಟ್ಟರ ಸ್ಮರಣಾರ್ಥ ಪ್ರೇಮಾ ಕೆ.ಭಟ್ ಇವರು ನೀಡುವ ನಗದು ಪುರಸ್ಕಾರವನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಪಿಟಿಎ ಅಧ್ಯಕ್ಷ ಜನಾರ್ಧನ ಎಸ್ ಮತ್ತು ಎಂಪಿಟಿಎ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ನಡೆಯಿತು. ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್ ಸ್ವಾಗತಿಸಿ, ಕಿರಣ್ ಕೆ ಎಸ್ ವಂದಿಸಿದರು. ಹರೀಶ್ ಜಿ ಕಾರ್ಯಕ್ರಮ ನಿರ್ವಹಿಸಿದರು.